ನೀರಿನ ಸಂಪಿನಲ್ಲಿ ಪತ್ತೆಯಾಯ್ತು ಬಿಜೆಪಿ ಪಾಲಿಕೆ ಸದಸ್ಯೆಯ ಶವ

First Published 15, Mar 2018, 3:24 PM IST
BJP councillors body found in her house water tank in Udaipur
Highlights

ಗರೀಮಾ ಪಠಾಣ್(35) ಆತ್ಮಹತ್ಯೆ ಮಾಡಿಕೊಂಡ ಪಾಲಿಕೆ ಸದಸ್ಯೆ.ಇವರು ಕೆಲವು ದಿನಗಳಿಂದ ಪತಿಯಿಂದ ಪ್ರತ್ಯೇಕವಾಗಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.

ಜೈಪುರ(ಮಾ.15): ನೀರಿನ ಸಂಪಿನಲ್ಲಿ ಪಾಲಿಕೆ ಸದಸ್ಯೆಯೊಬ್ಬರ ಶವ ಪತ್ತೆಯಾದ ಘಟನೆ ಜೈಪುರದ ಉದಯಪುರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ.

ಗರೀಮಾ ಪಠಾಣ್(35) ಆತ್ಮಹತ್ಯೆ ಮಾಡಿಕೊಂಡ ಪಾಲಿಕೆ ಸದಸ್ಯೆ.ಇವರು ಕೆಲವು ದಿನಗಳಿಂದ ಪತಿಯಿಂದ ಪ್ರತ್ಯೇಕವಾಗಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಪ್ರಾಥಮಿಕ ಪುರಾವೆಗಳ ಅನ್ವಯ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳು ತಾಯಿಯ ಶವವನ್ನು ನೋಡಿ ನಂತರ ತಂದೆಗೆ ತಿಳಿಸಿದ್ದಾರೆ. ಪಾಲಿಕೆ ಸದಸ್ಯೆಯ ಪತಿ ಅದೇ ಠಾಣೆ ವ್ಯಾಪ್ತಿಯ ಹಣಕಾಸು ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಠಾಣ್ ಅವರು ಜಾಟ್'ವಾಡ್ ಪ್ರದೇಶದ ಬಿಜೆಪಿ ಸದಸ್ಯೆಯಾಗಿದ್ದು,ಎಲ್ಲ ಹಂತಗಳಿಂದಿಲೂ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

loader