ಕೇರಳ (ಅ.12): ಇಲ್ಲಿನ ಕಣ್ಣೂರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಿದ್ದರಿಂದ ಆಕ್ರೋಶಗೊಂಡ ಬಿಜೆಪಿ ನಾಳೆ ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದೆ.
ಕೇರಳ (ಅ.12): ಇಲ್ಲಿನ ಕಣ್ಣೂರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಿದ್ದರಿಂದ ಆಕ್ರೋಶಗೊಂಡ ಬಿಜೆಪಿ ನಾಳೆ ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದೆ.
ತಮ್ಮ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಕ್ಕಾಗಿ ಮಾರ್ಕಿಸ್ಟ್ ಪಕ್ಷವನ್ನು ದೂಷಿಸುತ್ತಾ ಈ ರೀತಿ ಹತ್ಯೆ ಮಾಡುವುದರಿಂದ ಜನರು ಎಡಪಂತೀಯವನ್ನು ಅನುಸರಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಈ ವರ್ಷ ಕಣ್ಣೂರು ಜಿಲ್ಲೆಯಲ್ಲಿ ನಡೆದ 7 ನೇ ಹತ್ಯೆ ಇದಾಗಿದೆ. ಈ ವಿಚಾರವನ್ನು ಬಿಜೆಪಿ ಎತ್ತಲಿದ್ದು ಎಡಪಂತೀಯರ ಹಿಂಸೆಗೆ ಖಂಡಿತಾ ಉತ್ತರ ಕೊಡುತ್ತೇವೆ ಎಂದು ಬಿಜೆಪಿ ವಕ್ತಾರ ಸಿದ್ದಾರ್ಥ್ ಸಿಂಗ್ ಹೇಳಿದ್ದಾರೆ.
ತಮ್ಮ ಪಕ್ಷದ ತತ್ವ ಸಿದ್ದಾಂತಗಳನ್ನು ಬೆಂಬಲಿಸದಿದ್ದವರಿಗೆ ಮಾರ್ಕಿಸ್ಟ್ ಪಕ್ಷ ಹಿಂಸೆ ನೀಡುತ್ತದೆ. ಅವರ ಸಾವಿನಲ್ಲಿ ಮೌನವಹಿಸುತ್ತದೆ. ಕೇರಳದಲ್ಲಿಯೂ ಸಹ ಇದೇ ನಡೆಯುತ್ತಿದೆ ಎಂದು ಸಿದ್ದಾರ್ಥ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.