ರಾಹುಲ್ ಟ್ವೀಟ್ ಗೆ ಮಲ್ಯ ರಿಟ್ವೀಟ್: ಮುಗುಳ್ನಕ್ಕ ಬಿಜೆಪಿ!

BJP attacks Congress after Vijay Mallya retweets Rahul Gandhi's post
Highlights

ರಾಹುಲ್ ಟ್ವೀಟ್ ಗೆ ಮಲ್ಯ ರಿಟ್ವೀಟ್

ಪೇಚಿಗೆ ಸಿಲುಕಿದ ಕಾಂಗ್ರೆಸ್ ಪಕ್ಷ

ಮಗಾಘಟಬಂಧನಕ್ಕೆ ಮಹಾವಂಚಕ ಸಾಥ್

ಮಲ್ಯ ರಿಟ್ವೀಟ್ ಗೆ ಕಿಡಿಕಾರಿದ ಬಿಜೆಪಿ

ನವದೆಹಲಿ(ಜು.1): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟ್ ಗೆ ಮದ್ಯದ ದೊರೆ ವಿಜಯ್ ಮಲ್ಯ ರಿಟ್ವೀಟ್ ಮಾಡಿದ್ದು ಕಾಂಗ್ರೆಸ್ ನ್ನು ಪೇಚಿಗೆ ಸಿಲುಕಿಸಿದ್ದಾರೆ. 

ವಿಜಯ್ ಮಲ್ಯ ರಿಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಅನಿಲ್ ಬಲುನಿ, ಮಲ್ಯ ಕಾಂಗ್ರೆಸ್ ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಈ ರಿಟ್ವೀಟ್ ಅದನ್ನು ಬಹಿರಂಗಪಡಿಸಿದೆಯಷ್ಟೇ ಎಂದು ಹೇಳಿದ್ದಾರೆ. 

ಮಹಾ ಥಗ್( ಮಹಾ ವಂಚಕ) ಮಹಾಘಟಬಂಧನಕ್ಕೆ ಬೆಂಬಲ ನೀಡಿದ್ದಾರೆ ಎಂದು ಬಿಜೆಪಿ ವಿಜಯ್ ಮಲ್ಯ ಅವರನ್ನು ಲೇವಡಿ ಮಾಡಿದೆ. ವಿಜಯ್ ಮಲ್ಯಗೆ ಸಾಲ ದೊರೆತಿದ್ದು ಕಾಂಗ್ರೆಸ್ ನ ಅವಧಿಯಲ್ಲಿಯೇ ಎಂದು ಬಿಜೆಪಿ ಆರೋಪಿಸಿದೆ. 

ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ನ್ನು ಮಲ್ಯ ರಿಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಮಲ್ಯ ವಿರುದ್ಧ ವಾಗ್ದಾಳಿ ನಡೆಸಿದೆ.
 

loader