ಗೌರಿ ಲಂಕೇಶ್​ ಹತ್ಯೆ ವಿಚಾರದಲ್ಲಿ ಬಿಜೆಪಿ ಹಾಗೂ ಆರ್​ಎಸ್​ಎಸ್​ ವಿರುದ್ಧ ಪ್ರಗತಿಪರರ ಆರೋಪಕ್ಕೆ ಬ್ರೇಕ್​ ಹಾಕಲು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಸ್​ ಮತ್ತು ಸಂತೋಷ್​ ಪ್ಲಾನ್​ ಮಾಡಿದ್ದಾರೆ.

ಬೆಂಗಳೂರು(ಸೆ.13): ಗೌರಿ ಲಂಕೇಶ್​ ಹತ್ಯೆ ವಿಚಾರದಲ್ಲಿ ಬಿಜೆಪಿ ಹಾಗೂ ಆರ್​ಎಸ್​ಎಸ್​ ವಿರುದ್ಧ ಪ್ರಗತಿಪರರ ಆರೋಪಕ್ಕೆ ಬ್ರೇಕ್​ ಹಾಕಲು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಸ್​ ಮತ್ತು ಸಂತೋಷ್​ ಪ್ಲಾನ್​ ಮಾಡಿದ್ದಾರೆ.

ಸಂತೋಷ್​ ಸೂಚನೆಯಂತೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ. ಮೊದಲು ಹಂತವಾಗಿ ರಾಮಚಂದ್ರ ಗುಹಾಗೆ ಲೀಗಲ್​ ನೋಟಿಸ್​ ನೀಡಿತ್ತು. ಸಂತೋಷ್​ ನಿರ್ದೇಶನದಂತೆ ನಿನ್ನೆ ತುರ್ತು ಸುದ್ದಿಗೋಷ್ಠಿ ನಡೆಸಿ ಆರೋಪ ಮುಂದುವರಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ಬಿಜೆಪಿ ರವಾನಿಸಿದೆ. ಇದೇ ತಂತ್ರವನ್ನು ಮುಂದುವರಿಸುವ ಬಗ್ಗೆ ಕೂಡ ಬಿಜೆಪಿ ನಿರ್ಧರಿಸಿದೆ.