ಈಗಾಗಲೇ ದೇಶದ ಹಲವೆಡೆ ಮಿತ್ರಪಕ್ಷಗಳಿಂದಲೇ ಮುಜುಗರ ಎದುರಿಸುತ್ತಿರುವ ಬಿಜೆಪಿಗೆ ಉತ್ತರ ಪ್ರದೇಶದಲ್ಲೂ ಹಿನ್ನಡೆಯಾಗುವ ಲಕ್ಷಣವಿದೆ.

ಲಖನೌ: ಈಗಾಗಲೇ ದೇಶದ ಹಲವೆಡೆ ಮಿತ್ರಪಕ್ಷಗಳಿಂದಲೇ ಮುಜುಗರ ಎದುರಿಸುತ್ತಿರುವ ಬಿಜೆಪಿಗೆ ಉತ್ತರ ಪ್ರದೇಶದಲ್ಲೂ ಹಿನ್ನಡೆಯಾಗುವ ಲಕ್ಷಣವಿದೆ.

 ಅಲ್ಲಿನ ಎನ್‌ಡಿಎ ಮೈತ್ರಿಕೂಟದ ಎಸ್‌ಬಿಎಸ್‌ಪಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿ, ಮೈತ್ರಿ ಪುನರ್‌ ಪರಿಶೀಲಿಸುವ ಬಗ್ಗೆ ಮಾತನಾಡಿದೆ.

ತಮ್ಮ ಪಕ್ಷವನ್ನು ನಿರ್ಲಕ್ಷಿಸುವ ಮೂಲಕ ಆದಿತ್ಯನಾಥ ಮೈತ್ರಿಧರ್ಮ ಪಾಲಿಸುತ್ತಿಲ್ಲ ಎಂದು ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಮುಖಂಡ ಓಂ ಪ್ರಕಾಶ್‌ ರಾಜ್‌ಭರ್‌ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಂಗಳವಾರ ಲಖನೌಗೆ ಬಂದಾಗ ಪರಿಸ್ಥಿತಿಯ ಬಗ್ಗೆ ವಿವರವಾಗಿ ಚರ್ಚಿಸುತ್ತೇನೆ.

ಪಕ್ಷ ಎತ್ತುವ ವಿಷಯಗಳ ಬಗ್ಗೆ ಶಾ ಒಪ್ಪದಿದ್ದಲ್ಲಿ, ಮೈತ್ರಿಯ ಬಗ್ಗೆ ಮರುಪರಿಶೀಲಿಸಲಾಗುತ್ತದೆ ಎಂದು ರಾಜ್‌ಭರ್‌ ಹೇಳಿದ್ದಾರೆ.