ಪಟನಾ[ಡಿ.16]: ಎನ್‌ಡಿಎ ದ ಮುಖ್ಯ ಪಾಲುದಾರ ಪಕ್ಷವಾಗಿರುವ ಜೆಡಿಯು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದೇ ಆದಲ್ಲಿ ಅದಕ್ಕೆ ತನ್ನ ಸಮ್ಮತಿ ಇಲ್ಲವೆಂದು ಸ್ಪಷ್ಟೀಕರಿಸಿದೆ.

‘ಪರಸ್ಪರ ಒಪ್ಪಿಗೆ ಇಲ್ಲವೇ ನ್ಯಾಯಾಲಯ ಮೂಲಕವೇ ರಾಮಮಂದಿರ ವಿಷಯ ಇತ್ಯರ್ಥವಾಗಬೇಕು ಎಂಬ ನಮ್ಮ ಹಿಂದಿನ ತೀರ್ಮಾನಗಳಿಗೆ ನಾವು ಈಗಲೂ ಬದ್ಧ ಎಂದು’ ಎಂದು ಜೆಡಿ(ಯು) ದ ಕಾರ್ಯದರ್ಶಿ ರಾಮಚಂದ್ರ ಪ್ರಸಾದ್‌ ಸಿಂಗ್‌ ಹೇಳಿದ್ದಾರೆ.

ನಾವು ಸಮತಾಪಕ್ಷದಲ್ಲಿ ಇದ್ದ ದಿನಗಳಿಂದಲೂ ಇದೇ ಅಭಿಪ್ರಾಯ ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.