Asianet Suvarna News Asianet Suvarna News

ಸಂತೋಷ್ ಹತ್ಯೆಗೆ ಬಳಸಿದ್ದು ಸ್ಕ್ರೂ ಡ್ರೖವರ್ ಅಲ್ಲ; ಚಾಕು!

ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಗೆ ಆರೋಪಿಗಳು ಸ್ಕ್ರೂ ಡ್ರೈವರ್ ಅಲ್ಲ, ಬದಲಿಗೆ ಚಾಕು ಬಳಸಿದ್ದರು ಎಂಬುದು ಸಿಸಿಬಿ ಪೊಲೀಸರು ತನಿಖೆ ವೇಳೆ ಬೆಳಕಿಗೆ ಬಂದಿದೆ. ಚಾಕುವನ್ನು ಜಪ್ತಿ ಮಾಡಲಾಗಿದೆ
ಎಂದು ಪೊಲೀಸರು ಹೇಳಿದ್ದಾರೆ.

BJP Activist Santhosh Murder get Twist

ಬೆಂಗಳೂರು  (ಫೆ.12): ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಗೆ ಆರೋಪಿಗಳು ಸ್ಕ್ರೂ ಡ್ರೈವರ್ ಅಲ್ಲ, ಬದಲಿಗೆ ಚಾಕು ಬಳಸಿದ್ದರು ಎಂಬುದು ಸಿಸಿಬಿ ಪೊಲೀಸರು ತನಿಖೆ ವೇಳೆ ಬೆಳಕಿಗೆ ಬಂದಿದೆ. ಚಾಕುವನ್ನು ಜಪ್ತಿ ಮಾಡಲಾಗಿದೆ
ಎಂದು ಪೊಲೀಸರು ಹೇಳಿದ್ದಾರೆ.
ಜ.31  ರಂದು ಬಿಜೆಪಿ ಕಾರ್ಯಕರ್ತನು  ಆಗಿರುವ ಸಂತೋಷ್‌ನನ್ನು ಜೆ.ಸಿ.ನಗರದಲ್ಲಿ ನಾಲ್ವರು ಆರೋಪಿಗಳು ಹತ್ಯೆಗೈದಿದ್ದರು. ಪ್ರಕರಣದ ಸಂಬಂಧ ನಾಲ್ವರು ಕೊಲೆ ಆರೋಪಿಗಳಾದ ಜೆ.ಸಿ.ನಗರ ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ಖಾದರ್ ಪುತ್ರ ವಾಸಿಂ, ಈತನ ಸಹಚರರಾದ ಫಿಲಿಪ್ಸ್, ಇರ್ಫಾನ್ ಮತ್ತು ಉಮ್ಮರ್ ಎಂಬುವರನ್ನು  ಪೊಲೀಸರು ಬಂಧಿಸಿದ್ದರು. ‘ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಕ್ರೂ ಡ್ರೈವರ್‌ನಿಂದ ಸಂತೋಷ್  ಕಾಲಿಗೆ ಚುಚ್ಚಿದ್ದಾಗ ತೀವ್ರ ರಕ್ತಸ್ರಾವವಾಗಿ
ಮೃತಪಟ್ಟಿದ್ದ ಎಂದು ಹೇಳಿಕೆ ನೀಡಿದ್ದಾರೆ.

ಅವರು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ವಿಚಾರಣೆ ವೇಳೆ ಗೊತ್ತಾಗಿತ್ತು’ ಎಂದು ಗೃಹ ಸಚಿವ  ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದರು. ಈ  ಹೇಳಿಕೆ ನೀಡಿ ರಾಮಲಿಂಗಾರೆಡ್ಡಿ ಬಿಜೆಪಿ ನಾಯಕರ ಟೀಕೆಗೆ ಗುರಿಯಾಗಿದ್ದರು.
ಬಳಿಕ ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸಿಸಿಬಿಗೆ ವರ್ಗಾಯಿಸಿದ್ದರು. ಸಿಸಿಬಿ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಮೊದಲಿಗೆ ಆರೋಪಿಗಳು ಸ್ಕ್ರೂ
ಡ್ರೈವರ್ ಬಳಸಿದ್ದಾಗಿ ಹೇಳಿಕೆ ನೀಡಿದ್ದರು.

ಮರಣೋತ್ತರ ಪರೀಕ್ಷೆಯಲ್ಲಿ ಚಾಕು ಬಳಸಿರುವುದು ತಿಳಿದು ಬಂದಿತ್ತು. ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಚಾಕು ಬಳಸಿದ್ದಾಗಿ ಬಾಯ್ಬಿಟ್ಟಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕುವನ್ನು  ಅಲ್ಲಿಯೇ ಕಟ್ಟಡವೊಂದರ ಮೇಲ್ಛಾವಣಿ
ಮೇಲೆ ಎಸೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದರು.  ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.

Follow Us:
Download App:
  • android
  • ios