ಟಿವಿ ಕಾರ್ಯಕ್ರಮದಲ್ಲಿ ಅತಿಥಿಯಾದ ಹಕ್ಕಿ

Bird In Tv Programe
Highlights

ಸುದ್ದಿವಾಹಿನಿಯೊಂದರ ಲೈವ್ ಕಾರ್ಯಕ್ರಮದಲ್ಲಿ ಸುದ್ದಿವಾಚಕಿ ತಲೆ ಮೇಲೆಯೇ ಪಕ್ಷಿ ಬಂದು ಕುಳಿತು ಅತಿಥಿಯಾಗಿರುವ ಊಹೆಗೂ ಮೀರಿದ ಪ್ರಸಂಗ ವೊಂದು ನಡೆದಿದೆ.

ಬೆಂಗಳೂರು : ಸುದ್ದಿವಾಹಿನಿಯೊಂದರ ಲೈವ್ ಕಾರ್ಯಕ್ರಮದಲ್ಲಿ ಸುದ್ದಿವಾಚಕಿ ತಲೆ ಮೇಲೆಯೇ ಪಕ್ಷಿ ಬಂದು ಕುಳಿತು ಅತಿಥಿಯಾಗಿರುವ ಊಹೆಗೂ ಮೀರಿದ ಪ್ರಸಂಗ ವೊಂದು ನಡೆದಿದೆ.

ಕೆಎಫ್‌ಎಂಬಿ ಸುದ್ದಿವಾಹಿನಿಯಲ್ಲಿ ನಿಕೆಲ್ ಮೆಡಿನಾ ಎಂಬ ಆ್ಯಂಕರ್ ಮುಂದಿನ ಸೆಗ್ಮೆಂಟ್ ಪ್ರಾರಂಭಿಸುವುದಕ್ಕೂ ಮುನ್ನ ಬ್ರೇಕ್ ತೆಗೆದುಕೊಳ್ಳಲು ಮುಂದಾದಾಗ ಹಕ್ಕಿಯೊಂದು ಅವರ ತಲೆಯ ಮೇಲೆಯೇ ಕುಳಿತಿದೆ.

ಮೆಡಿನಾ ಅವರ ಸ್ಥಿತಿ ನೋಡಿ ಸಹೋದ್ಯೋಗಿ ಕಹ್ನೆರ್ಟ್ ನಗಲು ಆರಂಭಿಸಿದರು. ಕಹ್ನೆರ್ಟ್ ನಗುತ್ತಿದ್ದರೂ ವಿಚಲಿತಗೊಳ್ಳದ ಮೆಡಿನಾ ಸಹಜವಾಗಿಯೇ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

loader