ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ‘ಎ’ ಟೀಮ್ಗೆ ಆರಂಭದಲ್ಲೇ ಮಂದೀಪ್ ಸಿಂಗ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಈ ವೇಳೆ ಜೊತೆಯಾದ ಶಿಖರ್ ಧವನ್ ಮತ್ತು ಅಂಬಾಟಿ ರಾಯುಡು 111 ರನ್ಗಳ ಜೊತೆಯಾಟವಾಡಿದರು.
ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿದೆ. ಇಂಡಿಯಾ ‘ಎ’ ವಿರುದ್ಧ ರೋಚಕ ಜಯ ಸಾಧಿಸಿ, ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಮುಂಬೈನಲ್ಲಿ ರನ್ ಹೊಳೆಯೇ ಹರಿಸಿತು. ಎಲ್ಲಾ ಆಟಗಾರರಿಗೂ ಒಳ್ಳೆ ಅಭ್ಯಾಸವಾಯ್ತು.
ಭಾರತ-ಇಂಗ್ಲೆಂಡ್ ಅಭ್ಯಾಸ ಪಂದ್ಯ ಧೋನಿ ನಾಯಕತ್ವದ ಕೊನೆ ಪಂದ್ಯ ಎಂದೇ ಬಿಂಬಿಸಲಾಗಿತ್ತು. ಮಹಿ ಬ್ಯಾಟಿಂಗ್ನಲ್ಲಿ ಮಿಂಚಿದರೂ ನಾಯಕತ್ವದಲ್ಲಿ ಫೇಲ್ ಆದರು. ಅವರ ನಾಯಕತ್ವದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಭಾರತೀಯರು ಸೋಲು ಅನುಭವಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ‘ಎ’ ಟೀಮ್ಗೆ ಆರಂಭದಲ್ಲೇ ಮಂದೀಪ್ ಸಿಂಗ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಈ ವೇಳೆ ಜೊತೆಯಾದ ಶಿಖರ್ ಧವನ್ ಮತ್ತು ಅಂಬಾಟಿ ರಾಯುಡು 111 ರನ್ಗಳ ಜೊತೆಯಾಟವಾಡಿದರು. ಇಬ್ಬರೂ ಅರ್ಧ ಶತಕ ಬಾರಿಸಿದರು. ಧವನ್ 63 ರನ್ ಗಳಿಸಿ ಔಟಾದರು. ಇಲ್ಲಿಂದ ಯುವರಾಜ್ ಸಿಂಗ್ ಜೊತೆಯಾದ ರಾಯುಡು, ತಂಡವನ್ನ 200ರ ಗಡಿ ದಾಟಿಸಿದರು. ಯುವರಾಜ್ ಅರ್ಧಶತಕ ಬಾರಿಸಿದರೆ, ರಾಯುಡು ಶತಕ ಸಿಡಿಸಿ ಸಂಭ್ರಮಿಸಿದರು.
ರಾಯುಡು ಶತಕ ಬಾರಿಸಿ ಗಾಯಗೊಂಡು ನಿವೃತ್ತಿ ಆದರು. ಅಲ್ಲಿಂದ ಯುವರಾಜ ಮತ್ತು ಧೋನಿ ಜೊತೆಯಾಗಿ ಆಂಗ್ಲರನ್ನ ಚೆಂಡಾಡಿದರು. ಧೋನಿ ಕೊನೆ ಓವರ್ನಲ್ಲಿ 23 ರನ್ ಚಚ್ಚಿ ಬಿಸಾಕಿದರು. ಕೊನೆಗೆ ಭಾರತ ‘ಎ’ ತಂಡ 5 ವಿಕೆಟ್ ಕಳೆದುಕೊಂಡು 304 ರನ್ ಕಲೆಹಾಕ್ತು. ಧೋನಿ ಅಜೇಯ 68 ರನ್ ಬಾರಿಸಿದರು. ಗೆಲುವಿಗೆ 305 ರನ್ ಬೆನ್ನಟ್ಟಿದ ಇಂಗ್ಲೆಂಡ್ಗೆ ಸೂಪರ್ ಓಪನಿಂಗ್ ಸಿಕ್ತು. ಜಾಸನ್ ರಾಯ್ ಮತ್ತು ಅಲೆಕ್ಸ್ ಹೇಲ್ಸ್ 95 ರನ್ಗಳ ಜೊತೆಯಾಟವಾಡಿದರು. ರಾಯ್ ಹಾಫ್ ಸೆಂಚುರಿ ಬಾರಿಸಿದರು.
ಹೇಲ್ಸ್ ಹಾಗೂ ರಾಯ್ ಅವರನ್ನ ಕುಲ್ದೀಪ್ ಯಾದವ್ ಔಟ್ ಮಾಡಿದ್ರು. ಬಳಿಕ ನಾಯಕ ಇಯಾನ್ ಮಾರ್ಗನ್ ಅವರನ್ನ ಚಹಾಲ್ ಬಲಿ ಪಡೆದರು. ಈ ವೇಳೆ ಸಾಮ್ ಬಿಲ್ಲಿಂಗ್ಸ್ ಮತ್ತು ಜೋ ಬಟ್ಲರ್ ಭಾರತೀಯರನ್ನ ಕಾಡಿದರು. ಆದರೆ ಮತ್ತೆ ಇಂಗ್ಲೆಂಡ್ ಜೋಡಿಯನ್ನ ಬೇರ್ಪಡಿಸಿದ್ದು ಕುಲ್ದೀಪ್. ಬಟ್ಲರ್ ಹಾಗೂ ಮೊಯೀನ್ ಅಲಿ ಅವರನ್ನ ಔಟ್ ಮಾಡೋ ಮೂಲ್ಕ ಶಾಕ್ ನೀಡಿದರು.
ಆದರೆ ಸಾಮ್ ಬಿಲ್ಲಿಂಗ್ಸ್ ಹಾಗೂ ಲಿಯಾಮ್ ಡಾಸನ್ ಸೇರಿಕೊಂಡು ಭಾರತೀಯ ಬೌಲರ್ಗಳನ್ನ ಕಾಡಿದರು. ಕೊನೆಗೆ ಇಂಗ್ಲೆಂಡ್ 3 ವಿಕೆಟ್ಗಳ ಸಾಧಿಸಿತು. ಸಾಮ್ ಬಿಲ್ಲಿಂಗ್ಸ್ 93ರನ್ ಗಳಿಸಿ ಗೆಲುವಿನ ರುವಾರಿಯಾದರು. ಇಂಗ್ಲೆಂಡ್ ಸುಲಭವಾಗಿಯೇ ಗೆಲುವಿನ ದಡ ಸೇರಿತು. ಅಭ್ಯಾಸ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ಸ್ಕೋರ್
ಭಾರತ ಎ: 304/5 (50.0 ಓವರ್)
ಇಂಗ್ಲೆಂಡ್ ಇಲವೆನ್: 307/7 (48.5 ಓವರ್)
