ವಾಷಿಂಗ್ಟನ್[ನ.18]: ಎಚ್‌1ಬಿ ವೀಸಾದಾರರ ಸಂಗಾತಿಗಳು ಹೊಂದಿರುವ ಎಚ್‌4 ವೀಸಾ ರದ್ದುಗೊಳಿಸಲು ಹೊರಟಿರುವ ಡೊನಾಲ್ಡ್ ಟ್ರಂಪ್ ಸರ್ಕಾರದ ವಿರುದ್ಧ ಅಮೆರಿಕ ಸಂಸದರಲ್ಲೇ ಅಪಸ್ವರ ಸೃಷ್ಟಿಯಾಗಿದ್ದು, ಟ್ರಂಪ್ ಅವರ ಈ ನಡೆಯ ವಿರುದ್ಧ ಮಸೂದೆಯೊಂದನ್ನು ಅಮೆರಿಕದ ಸಂಸತ್ತಿನಲ್ಲಿ ಇಬ್ಬರು ಸಂಸದರು ಮಂಡಿಸಿದ್ದಾರೆ. 

ಎಚ್‌4 ವೀಸಾ ಇದ್ದರೆ ಎಚ್‌1ಬಿ ವೀಸಾದಾರರ ಸಂಗಾತಿಗಳು ಕೂಡ ಅಮೆರಿಕದಲ್ಲಿ ಕೆಲಸ ಮಾಡಬಹುದಾಗಿದೆ. ಆದರೆ ಈ ವೀಸಾ ರದ್ದುಗೊಳಿಸಲು ಟ್ರಂಪ್ ಮುಂದಾಗಿದ್ದಾರೆ. ಇದರಿಂದಾಗಿ ಅಮೆರಿಕ ಕಂಪನಿಗಳಿಗೆ ಸಿಗಬಹುದಾಗಿದ್ದ ಲಾಭವನ್ನು ದೇಶ ಕಳೆದುಕೊಳ್ಳಲಿದೆ. ಈ ಲಾಭವನ್ನು ಬೇರೆ ದೇಶಗಳು ಬಳಸಿಕೊಂಡು, ಅಮೆರಿಕ ಉದ್ಯಮಗಳ ವಿರುದ್ಧವೇ ಸೆಣಸಬಹುದು. ಹೀಗಾಗಿ ಎಚ್‌4 ವೀಸಾ ರದ್ದುಗೊಳಿಸುವ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಮಸೂದೆ ಪಾಸಾದರೆ ಎಚ್‌4 ವೀಸಾ ರದ್ದುಗೊಳಿಸುವ ಟ್ರಂಪ್ ಕ್ರಮಕ್ಕೆ ಬ್ರೇಕ್ ಬೀಳಲಿದೆ.