ನವದೆಹಲಿ, (ಜ17):ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ  ಬಡ ಜನರಿಗಾಗಿ ಆಯುಷ್​ಮಾನ್​  ಭಾರತ ಎಂಬ ಆರೋಗ್ಯ ಯೋಜನೆಯನ್ನು  ಜಾರಿಗೆ ತಂದಿದ್ದು, ಯೋಜನೆ ಭಾರಿ ಯಶಸ್ಸು ಕಂಡಿದೆ.

ಇನ್ನು ಈ ಯೋಜನೆಯ ಬಗ್ಗೆ ಮೈಕ್ರೋಸಾಫ್ಟ್​​  ಸಂಸ್ಥಾಪಕ ಬಿಲ್​ ಗೇಟ್ಸ್​ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅಲ್ಲಿ ಇಲ್ಲಿ ಓಡುವೆ ಏಕೆ: 'ಆಯುಷ್ಮಾನ್ ಭಾರತ್' ಮನೆ ಬಾಗಿಲಿಗೆ ಬರ್ತಿದೆ ಬೇಕೆ?

 ಆಯುಷ್​ಮಾನ್​  ಭಾರತ ಎಂಬ ಆರೋಗ್ಯ ಯೋಜನೆಯನ್ನು  ಜಾರಿಗೆ ತಂದು 100 ದಿನಗಳಾಗಿವೆ. ಯೋಜನೆ ಭಾರಿ ಯಶಸ್ಸು ಕಂಡಿದೆ. ಈ ನೂರು ದಿನದಲ್ಲಿ ಕೋಟ್ಯಂತರ ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಯೋಜನೆಯನ್ನು ಯಶಸ್ವಿಯಾಗಿ  ಅನುಷ್ಠಾನಗೊಳಿಸಿರುವುದಕ್ಕೆ ಭಾರತ ಸರ್ಕಾರವನ್ನು ಅಭಿನಂದಿಸಲು ಇಚ್ಛಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.