‘ಮಿಲಿಟರಿ ಕೋರ್ಟ್ ವಿಧಿಸಿದ ಆದೇಶದ ವಿರುದ್ಧ ಮಾತನಾಡುವುದು ವಿವಾದವಾಗುತ್ತದೆಯಾದರೂ, ತತ್ವದ ಆಧಾರದ ಮೇರೆಗೆ ತಮ್ಮ ಪಕ್ಷ ಮರಣ ದಂಡನೆ ಶಿಕ್ಷೆ ವಿರೋಧಿಸುತ್ತದೆ'- ಬಿಲಾವಲ್ ಭುಟ್ಟೊ-ಜರ್ದಾರಿ

ಲಾಹೋರ್(ಏ.11): ಕುಲಭೂಷಣ್ ಅವರಿಗೆ ಮರಣ ದಂಡನೆ ವಿಧಿಸಿದ ಪಾಕ್ ಸೇನಾ ನ್ಯಾಯಾಲಯದ ಆದೇಶಕ್ಕೆ ಪಾಕಿಸ್ತಾನ ಪೀಪಲ್ಸ್ ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೊ-ಜರ್ದಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ‘ಮಿಲಿಟರಿ ಕೋರ್ಟ್ ವಿಧಿಸಿದ ಆದೇಶದ ವಿರುದ್ಧ ಮಾತನಾಡುವುದು ವಿವಾದವಾಗುತ್ತದೆಯಾದರೂ, ತತ್ವದ ಆಧಾರದ ಮೇರೆಗೆ ತಮ್ಮ ಪಕ್ಷ ಮರಣ ದಂಡನೆ ಶಿಕ್ಷೆ ವಿರೋಧಿಸುತ್ತದೆ,’ ಎಂದು ಹೇಳಿದ್ದಾರೆ.

ತಮ್ಮ ಅಜ್ಜ ಜುಲ್ಫಿಕರ್ ಅಲಿ ಭುಟ್ಟೊ ಅವರಿಗೂ ಮರಣ ದಂಡನೆ ವಿಧಿಸಲಾಗಿತ್ತು ಎಂದು ಹೇಳಿರುವ ಬಿಲವಾಲ್ ಭುಟ್ಟೊ, ತತ್ವ ಸಿದ್ಧಾಂತದ ಆಧಾರದಲ್ಲಿ ಮರಣದಂಡನೆಯನ್ನು ಪಕ್ಷ ವಿರೋಧಿಸುತ್ತದೆ ಎಂದಿದ್ದಾರೆ.