ಇಸ್ಲಾಮಾಬಾದ್(ಮಾ.15): ಪುಲ್ವಾಮಾ ದಾಳಿ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ನಿದ್ದೆಯೇ ಮರೆತು ಹೋಗಿದೆ. ಒಂದು ಕಡೆ ಭಾರತ ಸೇನಾ ಕಾರ್ಯಾಚರಣೆಗಳ ಮೂಲಕ ಪಾಠ ಕಲಿಸುತ್ತಿದ್ದರೆ, ಮತ್ತೊಂದು ಕಡೆ ಭಯೋತ್ಪಾದನೆಗೆ ಬೆಂಬಲ ನಿಲ್ಲಿಸುವಂತೆ ವಿಶ್ವ ಸಮುದಾಯ ಒತ್ತಡ ಹೇರುತ್ತಲೇ ಇದೆ.

ಈ ಮಧ್ಯೆ ಪಾಕಿಸ್ತಾನದಲ್ಲೂ ಇಮ್ರಾನ್ ಖಾನ್ ಮುಖಭಂಗಕ್ಕೀಡಾಗುತ್ತಿದ್ದು, ಅಲ್ಲಿನ ರಾಜಕೀಯ ಪಕ್ಷಗಳು, ನಾಯಕರು ಇದೀಗ ಇಮ್ರಾನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದ್ದಾರೆ.

ಮತ್ತೊಂದು ದೇಶದ ಮೇಲೆ ದಾಳಿ ಮಾಡುವ ಭಯೋತ್ಪಾದಕ ಗುಂಪುಗಳು ಪಾಕಿಸ್ತಾನದಲ್ಲಿ ಆಶ್ರಯ ಏಕೆ ಪಡೆಯುತ್ತಿವೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ ಪಾಕ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಬೇರೊಂದು ದೇಶದ ಮೇಲೆ ದಾಳಿ ಮಾಡಲು ಭಯೋತ್ಪಾದಕರು ಪಾಕ್ ನೆಲವನ್ನು ಬಳಸಿಕೊಳ್ಳುತ್ತಿದ್ದು, ಇದರ ವಿರುದ್ಧ ಪಾಕ್ ಸರ್ಕಾರ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಲಾವಲ್ ಹರಿಹಾಯ್ದಿದ್ದಾರೆ.