Asianet Suvarna News Asianet Suvarna News

ಬೈಕ್​​ ವ್ಹೀಲಿಂಗ್​ ಮಾಡುವವರಿಗೆ ಕಾದಿದೆ ಕಂಟಕ, ವ್ಹೀಲಿಂಗ್ ಮಾಡುವ ಮುನ್ನ ಈ ಸ್ಟೋರಿ ನೋಡಿ....

Bike wheeling

ಬೆಂಗಳೂರು(ಸೆ.27): ಇತ್ತೀಚಿನ ಯುವಜನತೆಗೆ ಬೈಕ್ ವೀಲ್ಹಿಂಗ್ ಕ್ರೇಜ್ ಜಾಸ್ತಿಯಾಗಿದೆ. ಇದ್ರಿಂದ ಎಷ್ಟೇ ಅಪಘಾತಗಳಾದ್ರೂ ಇನ್ನೂ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಇಂಥವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. 

ನಿಮಗೆ ಬೈಕ್ ವೀಲ್ಹಿಂಗ್ ಕ್ರೇಜ್ ಇದ್ಯಾ? ಹಾಗಾದ್ರೆ ಇವಾಗ್ಲೆ ಬಿಟ್ರೆ ಒಳ್ಳೇದು. ಇಲ್ಲಾಂದ್ರೆ ಬೆಂಗಳೂರು ಸಂಚಾರಿ ಪೊಲೀಸರು ನಿಮ್ಮನ್ನು ಅರೆಸ್ಟ್ ಮಾಡಿ ಜೈಲಿಗಟ್ಟೋ ಚಾನ್ಸ್​ ಇದೆ. 

ಹೌದು ಕಳೆದ ಕೆಲ ದಿನಗಳಿಂದ ಬೆಂಗಳೂರು ಸಂಚಾರಿ ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪುಲಕೇಶಿನಗರ, ಶಿವಾಜಿನಗರ, ಬಾಣಸವಾಡಿ, ಇಂದಿರಾನಗರ, ಹಲಸೂರು ಸೇರಿ ವಿವಿಧ ಠಾಣಾ ವ್ಯಾಪ್ತೀಲಿ ಕಾರ್ಯಾಚರಣೆ ನಡೆಸಿ ವೀಲ್ಹೀಂಗ್ ಮಾಡೋರಿಗೆ ಸಖತ್ತಾಗೇ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು ಪೂರ್ವ ಸಂಚಾರ ಪೊಲೀಸರು ಕೆಲ ದಿನಗಳಿಂದ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಸಂಚಾರಿ ನಿಯಮ ಮೀರುವವರ ವಿರುದ್ಧ ಪೊಲೀಸರು ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ.

Follow Us:
Download App:
  • android
  • ios