ವಿಶ್ವಾಸಮತದಲ್ಲಿ  ಬಿಹಾರ ಸಿಎಂ ನಿತೀಶ್​ ಕುಮಾರ್​ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಇವರ ಈ ಗೆಲುವಿನಿಂದ ಆರ್;ಜೆಡಿ ಹಾಗೂ ಕಾಂಗ್ರೆಸ್'ಗೆ ಭಾರೀ ಮುಖಭಂಗವಾಗಿದೆ.

ಬಿಹಾರ(ಜು.28): ವಿಶ್ವಾಸಮತದಲ್ಲಿ ಬಿಹಾರ ಸಿಎಂ ನಿತೀಶ್​ ಕುಮಾರ್​ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಇವರ ಈ ಗೆಲುವಿನಿಂದ ಆರ್;ಜೆಡಿ ಹಾಗೂ ಕಾಂಗ್ರೆಸ್'ಗೆ ಭಾರೀ ಮುಖಭಂಗವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಹಾರದಲ್ಲಿ ಇಂದು ನಡೆದ ವಿಶೇಷ ಅಧಿವೇಶನದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದಿಂದ ಬಹುಮತ ಸಾಬೀತಾಗಿದೆ. ಒಟ್ಟು 243 ಸದಸ್ಯರ ಸಂಖ್ಯಾ ಬಲವನ್ನು ಬಿಹಾರ ವಿಧಾನಸಭೆ ಹೊಂದಿದ್ದು, ಸರ್ಕಾರ ರಚನೆಗೆ 122 ಶಾಸಕರ ಬೆಂಬಲ ಅಗತ್ಯವಿತ್ತು. ಆದರೆ ಇದಕ್ಕೂ ಹೆಚ್ಚು ಅಂದರೆ 131 ಶಾಸಕರ ಬಲದೊಂದಿಗೆ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಸಿಎಂ ನಿತೀಶ್ ಕುಮಾರ್ ಯಶಸ್ವಿಯಾಗಿದ್ದಾರೆ.

ಈ ಮೂಲಕ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಬಿಹಾರ ಸಿಎಂ ಗದ್ದುಗೆಗೇರಿರುವ ಜೆಡಿಯುನ ನಿತೀಶ್‌ ಕುಮಾರ್‌ ಇಂದು ತಮ್ಮ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಾರೆ.