ಲೋಕಸಭಾ ಚುನಾವಣೆಗೆ ಜೋರಾಗಿದೆ ಸಿದ್ಧತೆ | ಪ್ರಧಾನಿಯಾಗುವ ಕನಸು ಕಾಣ್ತಾ ಇದ್ದಾರೆ ನಿತೀಶ್ ಕುಮಾರ್ | ಮಹಾಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದಾರೆ ನಿತೀಶ್ ಕುಮಾರ್ 

ನವದೆಹಲಿ (ಅ. 03): 2019 ರ ಲೋಕಸಭಾ ಚುನಾವಣೆ ನಂತರ ಪ್ರಧಾನಿ ಆಗಲು ತನಗೂ ಒಂದು ಅವಕಾಶ ಸಿಗಬಹುದು ಎಂದು ಲೆಕ್ಕ ಹಾಕುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ ವಾರ ದಿಲ್ಲಿಗೆ ಬಂದು ಏಮ್ಸ್ ಆಸ್ಪತ್ರೆಯಲ್ಲಿ ಫುಲ್ ಬಾಡಿ ಚೆಕಪ್ ಮಾಡಿಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಲೋಕಸಭಾ ಚುನಾವಣೆ: ಬಿಜೆಪಿ ಗೆಲ್ಲಲು ರಾಮಮಂದಿರ ನಿರ್ಮಾಣ ಅನಿವಾರ್ಯನಾ?

ಎಲ್ಲವೂ ನಾರ್ಮಲ್ ಆಗಿರುವ ನಿತೀಶ್‌ಗೆ ಕಣ್ಣುಗಳಲ್ಲಿ ಮಾತ್ರ ಸ್ವಲ್ಪ ಸಮಸ್ಯೆ ಇದೆಯಂತೆ. ಚೆಕಪ್ ನಂತರ ರಹಸ್ಯ ಸ್ಥಳದಲ್ಲಿ ಅಮಿತ್ ಶಾರನ್ನು ಭೇಟಿಯಾದ ನಿತೀಶ್ ಬಿಹಾರದಲ್ಲಿ ಬಿಜೆಪಿ, ಜೆಡಿಯು ಮತ್ತು ರಾಮ್ ವಿಲಾಸ್ ಪಾಸ್ವಾನ್ ನಡುವೆ ಮೈತ್ರಿಯ ಮಾತುಕತೆಯನ್ನು ಕೂಡ ಬಹುತೇಕ ಮುಗಿಸಿದ್ದಾರೆ.

ಕೈಲಾಸ ಮಾನಸ ಸರೋವರ ಯಾತ್ರೆ ಬಳಿಕ ದೈವ ಭಕ್ತರಾದರಾ ರಾಹುಲ್ ಗಾಂಧಿ?

ನಿತೀಶ್ ಆಪ್ತರು ಹೇಳುತ್ತಿರುವ ಪ್ರಕಾರ ಉಪೇಂದ್ರ ಕುಶವಾಹ ಮಾತ್ರ ಬಿಜೆಪಿ ತೆಕ್ಕೆಯಿಂದ ಲಾಲು ಯಾದವ್ ಕಡೆ ಹಾರಲಿದ್ದಾರಂತೆ 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ಕ್ಲಿಕ್ ಮಾಡಿ