Asianet Suvarna News Asianet Suvarna News

ಕೈಲಾಸ ಮಾನಸ ಸರೋವರ ಯಾತ್ರೆ ಬಳಿಕ ದೈವ ಭಕ್ತರಾದರಾ ರಾಹುಲ್ ಗಾಂಧಿ?

ಮಾನಸ ಸರೋವರ ಯಾತ್ರೆ ಬಳಿಕ ರಾಹುಲ್ ಗಾಂಧಿ ದೈವ ಭಕ್ತರಾದ್ರಾ? ಮಧ್ಯಪ್ರದೇಶ ಚುನಾವಣೆ ಯಾತ್ರೆಯನ್ನು ಚಿತ್ರಕೂಟದ ರಾಮ ಮಂದಿರದಿಂದ ಆರಂಭಿಸಿದ ರಾಹುಲ್ ಗಾಂಧಿ ಈಗ ಹಿಂದುಗಳನ್ನು ಓಲೈಸಲು ಆರಂಭಿಸಿದ್ದಾರೆ. 

Is Rahul Gandhi become devotee after Kailasa Manasa Sarovara Yatra?
Author
Bengaluru, First Published Oct 3, 2018, 11:36 AM IST | Last Updated Oct 3, 2018, 11:36 AM IST

ನವದೆಹಲಿ (ಅ. 03): ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ಬಂದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೋದಲ್ಲೆಲ್ಲ ಪಕ್ಷದ ಕಾರ್ಯಕರ್ತರು ‘ಬಮ್ ಬಮ್ ಭೋಲೇ’ ಎಂದು ಜೋರಾಗಿ ಕೂಗುತ್ತಾರೆ. ತನ್ನ ಮಧ್ಯಪ್ರದೇಶ ಚುನಾವಣೆ ಯಾತ್ರೆಯನ್ನು ಚಿತ್ರಕೂಟದ ರಾಮ ಮಂದಿರದಿಂದ ಆರಂಭಿಸಿದ ರಾಹುಲ್ ಗಾಂಧಿ ಈಗ ಹಿಂದುಗಳನ್ನು ಓಲೈಸಲು ಆರಂಭಿಸಿದ್ದಾರೆ.

ಇದನ್ನು ನೋಡಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ದುರ್ಗಾ ಪೂಜಾ ಪೆಂಡಾಲ್‌ಗೆ ಭೇಟಿ ನೀಡುವಂತೆ ಕೇಳಿಕೊಂಡಿದ್ದು, ದೇವಿ ಪೂಜೆಗಾಗಿ ರಾಹುಲ್ ಅಕ್ಟೋಬರ್ ೧೭ಕ್ಕೆ ಕೊಲ್ಕತ್ತಾಗೆ ಹೊರಟಿದ್ದಾರೆ. ಗುಜರಾತ್‌ನಲ್ಲಿ ಮೊದಲ ಬಾರಿಗೆ ಟೆಂಪಲ್ ರನ್ ಆರಂಭಿಸಿದ್ದ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಕೂಡ ಹಿಂದುಗಳನ್ನು ಓಲೈಸಲು ಇದನ್ನೇ ಮುಂದುವರೆಸಿದ್ದರು.

ಮೂರು ದಶಕಗಳ ಹಿಂದೆ ಶಹಬಾನು ಪ್ರಕರಣದಿಂದ ಹಿಂದೂಗಳು ಸಿಟ್ಟಾಗಿದ್ದಾಗ ರಾಮ ಮಂದಿರದ ಬಾಗಿಲು ತೆಗೆಸಿದ್ದು ರಾಹುಲ್ ತಂದೆ ರಾಜೀವ್ ಗಾಂಧಿ. ಈಗ ಅಪ್ಪನ ಹಾದಿಯಲ್ಲೇ ಮಗ ಹೊರಟ ಹಾಗಿದೆ.

-ಪ್ರಶಾಂತ್ ನಾತು, ಸುವರ್ಣನ್ಯೂಸ್, ದೆಹಲಿ ವಿಶೇಷ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

Latest Videos
Follow Us:
Download App:
  • android
  • ios