ತೋಟದಿಂದ ಮಾವಿನ ಹಣ್ಣನ್ನು ಕಿತ್ತ ಕಾರಣಕ್ಕಾಗಿ ತೋಟದ ಮಾಲೀಕ 10 ವರ್ಷದ ಬಾಲಕನೊಬ್ಬನನ್ನು ಗುಂಡಿಟ್ಟು ಹತ್ಯೆ ಮಾಡಿರುವ ದಾರುಣ ಘಟನೆ ಬಿಹಾರದ ಖಜಾರಿಯಾ ಜಿಲ್ಲೆಯಲ್ಲಿ ನಡೆದಿದೆ.

ಖಜಾರಿಯಾ (ಬಿಹಾರ): ತೋಟದಿಂದ ಮಾವಿನ ಹಣ್ಣನ್ನು ಕಿತ್ತ ಕಾರಣಕ್ಕಾಗಿ ತೋಟದ ಮಾಲೀಕ 10 ವರ್ಷದ ಬಾಲಕನೊಬ್ಬನನ್ನು ಗುಂಡಿಟ್ಟು ಹತ್ಯೆ ಮಾಡಿರುವ ದಾರುಣ ಘಟನೆ ಬಿಹಾರದ ಖಜಾರಿಯಾ ಜಿಲ್ಲೆಯಲ್ಲಿ ನಡೆದಿದೆ.

ಶೇರ್‌ಘಡ್‌ ಗ್ರಾಮದ ಸತ್ಯಮ್‌ ಎಂಬ ಬಾಲಕ ಗುರುವಾರ ಮಾವಿನ ತೋಪಿನಲ್ಲಿ ಹಣ್ಣುಗಳನ್ನು ಕೀಳುತ್ತಿದ್ದ.

ಇದನ್ನು ನೋಡಿದ ರಾಮ್‌ ಯಾದವ್‌ ಎಂಬಾತ ಬಾಲಕನಿಗೆ ತೋಟದಿಂದ ತೆರಳುವಂತೆ ಸೂಚಿಸಿದ್ದ. ಆದರೆ, ಅದಕ್ಕೆ ಬಾಲಕ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಆತ ಗನ್‌ನಿಂದ ತಲೆಗೆ ಗುಂಡು ಹಾರಿಸಿದ್ದರಿಂದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.