ಟ್ವೀಟ್ ಬಾಂಬ್’ಗೆ ಬಿಗ್ ಟ್ವಿಸ್ಟ್ ಕೊಟ್ಟ ಕಾಂಗ್ರೆಸ್ ಮುಖಂಡ ವೀರಪ್ಪ ಮೋಯ್ಲಿ..!

First Published 16, Mar 2018, 9:02 AM IST
Big Twist To Veerappa Moily Tweet Bomb
Highlights

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಹಾಗೂ ಅದರ ಹಿಂದಿನ ಹಣದ ಪ್ರಭಾವದ ಕುರಿತು ಅಸಮಾಧಾನ ಭುಗಿಲೆದ್ದಿದ್ದು, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಮುಖ್ಯಸ್ಥರೂ ಆಗಿ ರುವ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಅವರು ಲೋಕೋಪ ಯೋಗಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದರು. ಇದೀಗ  ಪ್ರಕರಣ ಸಂಬಂಧ ಅವರು ಇದೀಗ ಉಲ್ಟಾ ಹೊಡೆದಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಬೆಂಗಳೂರು : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಹಾಗೂ ಅದರ ಹಿಂದಿನ ಹಣದ ಪ್ರಭಾವದ ಕುರಿತು ಅಸಮಾಧಾನ ಭುಗಿಲೆದ್ದಿದ್ದು, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಮುಖ್ಯಸ್ಥರೂ ಆಗಿ ರುವ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಅವರು ಲೋಕೋಪ ಯೋಗಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದರು. ಇದೀಗ  ಪ್ರಕರಣ ಸಂಬಂಧ ಅವರು ಇದೀಗ ಉಲ್ಟಾ ಹೊಡೆದಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಗುರುವಾರ ರಾತ್ರಿ ಟ್ವೀಟ್ ಮೊಯ್ಲಿ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ‘ರಾಜಕೀಯದಲ್ಲಿನ ಹಣದ ಸಮಸ್ಯೆಯನ್ನು ಕಾಂಗ್ರೆಸ್ ಬಗೆಹರಿಸಿ ಕೊಳ್ಳಬೇಕಿದೆ. ರಸ್ತೆ ಗುತ್ತಿಗೆದಾರರು ಹಾಗೂ ರಾಜ್ಯ ಲೋಕೋಪಯೋಗಿ ಸಚಿವರ ಜೊತೆ ಅವರು ಹೊಂದಿರುವ ನಂಟು ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸುವುದು ದುಬಾರಿಯಾದೀತು’ ಎಂದು ಹೇಳಲಾಗಿತ್ತು.

ಇದೇ ರೀತಿಯ ಟ್ವೀಟ್ ಒಂದನ್ನು ಮೊಯ್ಲಿ ಅವರ ಪುತ್ರ ಉದ್ಯಮಿ ಹರ್ಷ ಮೊಯ್ಲಿ ಖಾತೆಯಿಂದಲೂ ಮಾಡಿದ್ದು ರಾಜಕೀಯ ವಲಯದಲ್ಲಿ ಹುಬ್ಬೇರುವಂತೆ ಮಾಡಿತ್ತು.

ಇದೀಗ  ಪ್ರಕರಣ ಸಂಬಂಧ ಅವರು ಇದೀಗ ಉಲ್ಟಾ ಹೊಡೆದಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಆದ್ದರಿಂದ ಬೇಡಿಕೆ ಈಡೇರಿದ ಬಳಿಕ ಮೋದಿ ಉಲ್ಟಾ ಹೊಡೆದಿದ್ದಾರಾ ಎನ್ನುವ ಪ್ರಶ್ನೆ  ಮೂಡಿದೆ. ಟ್ವೀಟ್ ಮಾಡಿದ್ದು, ನಾನಲ್ಲ ಅದನ್ನು ಯಾರು ಮಾಡಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸಬೇಕು ಎಂದು ಹೇಳಿಕೆ ನೀಡಿದ್ದಾರೆ.

loader