ದಯಾನಂದಸ್ವಾಮಿ ರಾಸಲೀಲೆ ಪ್ರಕರಣಕ್ಕೆ  ಸ್ಫೋಟಕ ಟ್ವಿಸ್ಟ್​ ಸಿಕ್ಕಿದೆ.  ಪ್ರವೀಣ್, ಹಿಮಾಚಲನಿಂದ ಸ್ವಾಮೀಜಿ ಹನಿಟ್ರ್ಯಾಪ್​​ ತಂತ್ರ ನಡೆಸಿದ್ದಾರೆ. ಸಿಡಿ ಇಟ್ಟುಕೊಂಡು ಸ್ವಾಮೀಜಿ ಬಳಿ ದುಡ್ಡು ವಸೂಲಿಗೆ ಮಾಸ್ಟರ್ ಪ್ಲಾನ್​ ನಡೆಸಿದ್ದು,  ಗ್ರಾಮದ ಯುವಕ ಹರೀಶ್ ಎಂಬುವನ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ.

ಬೆಂಗಳೂರು(ಅ.28): ದಯಾನಂದಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​ ಸಿಕ್ಕಿದೆ. ಪ್ರವೀಣ್, ಹಿಮಾಚಲನಿಂದ ಸ್ವಾಮೀಜಿ ಹನಿಟ್ರ್ಯಾಪ್​​ ತಂತ್ರ ನಡೆಸಿದ್ದಾರೆ. ಸಿಡಿ ಇಟ್ಟುಕೊಂಡು ಸ್ವಾಮೀಜಿ ಬಳಿ ದುಡ್ಡು ವಸೂಲಿಗೆ ಮಾಸ್ಟರ್ ಪ್ಲಾನ್​ ನಡೆಸಿದ್ದು, ಗ್ರಾಮದ ಯುವಕ ಹರೀಶ್ ಎಂಬುವನ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ.

ಸ್ವಾಮೀಜಿ ಪರ ಮಠದ ಭಕ್ತರಿಂದ ಹರೀಶ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಘಟನೆ ಬಳಿಕ ಹರೀಶ್ ತಲೆಮರೆಸಿಕೊಂಡಿದ್ದಾನೆ. ಇನ್ನು ವಿಡಿಯೋದಲ್ಲಿ ಹಿಮಾಚಲ, ಪ್ರವೀಣ್​ ಬಗ್ಗೆ ಮಾಹಿತಿ ನೀಡಿರುವ ಹರೀಶ್​​ ನಮ್ಮ ಬಳಿ ಇದೆ ರಾಸಲೀಲೆ ಸಿಡಿ ಇದೆ, ಸ್ವಾಮೀಜಿ ಬಳಿ 20 ಲಕ್ಷ ಕೇಳುವಂತೆ ಹಿಮಾಚಲ ಆಮಿಷವೊಡ್ಡಿದ್ರು ಎಂದಿದ್ದಾನೆ.