ನವದೆಹಲಿ[ಅ. 21]  17 ಅನರ್ಹ ಶಾಸಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸುಪ್ರೀಂಕೋರ್ಟ್ ನಲ್ಲಿ ನಾಳೆ[ಅ. 22]ಯೇ ಅನರ್ಹರ ಅರ್ಜಿ ವಿಚಾರಣೆ ನಡೆಯಲಿದೆ.

ಬುಧವಾರಕ್ಕೆ ವಿಚಾರಣೆ ಮುಂದೂಡಲು ಸುಪ್ರೀಂಕೋರ್ಟ್ ಇಂದು ಬೆಳಗ್ಗೆ ಒಪ್ಪಿತ್ತು. ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಮನವಿ  ಪುರಸ್ಕರಿಸಿ ಮುಂದೂಡಿತ್ತು. 

ಆದರೆ ಚುನಾವಣಾ ಆಯೋಗದ ವಕೀಲರು ಮಧ್ಯಾಹ್ನ ಇದಕ್ಕೆ ಆಕ್ಷೇಪ ಎತ್ತಿದರು. ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡಬೇಡಿ, ಚುನಾವಣಾ ದಿನಾಂಕ ನಿಗದಿಯಾಗಿರುವುದರಿಂದ  ವಿಳಂಬ ಬೇಡ. 20ಕ್ಕೂ ಹೆಚ್ಚು ದಿನ ಕೊಟ್ಟಿದ್ದರೂ ಕಾಂಗ್ರೆಸ್ ಆಕ್ಷೇಪಣೆ ಸಲ್ಲಿಸಿಲ್ಲ. ಈಗ ಒಂದು ದಿನದಲ್ಲಿ ಸಲ್ಲಿಸುವುದು ಸಮಯ ಕೊಲ್ಲುವ ಆಟ. ಕರ್ನಾಟಕ ಹೈಕೋರ್ಟ್ ನಲ್ಲಿಯೂ ಅರ್ಜಿಯೊಂದು ದಾಖಲಾಗಿದೆ ಎಂದು ಚುನಾವಣಾ ಆಯೋಗ ವಾದ ಮುಂದಿಟ್ಟಿದೆ.

ಅನರ್ಹ ಶಾಸಕರ ವಾಸ್ತವ ಸ್ಥಿತಿ ಎಲ್ಲಿಗೆ ಬಂದು ನಿಂತಿದೆ?

ವಿಳಂಬ ಮಾಡದೇ ಸುಪ್ರೀಂಕೋರ್ಟ್ ಈ ಪ್ರಕರಣ ಇತ್ಯರ್ಥ ಮಾಡಬೇಕು. ಕಾಂಗ್ರೆಸ್ ಪರ ವಕೀಲರು ಆಕ್ಷೇಪ ಒಂದು ದಿನ ಬಿಟ್ಟೇ ಆಕ್ಷೇಪ ಸಲ್ಲಿಸಲಿ. ನಾಳೆ ಉಳಿದವರ ವಾದವನ್ನು ಆಲಿಸಿ ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಆಯೋಗದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಅ. 22ರ ಮಂಗಳವಾರ ವಿಚಾರಣೆ ಶುರು ಮಾಡಲಿದೆ.  ಹಾಗಾಗಿ ಮೊದಲ ಪ್ರಕರಣವಾಗಿ ಅನರ್ಹ ಶಾಸಕರ ಪ್ರಕರಣವನ್ನೇ  ರಮಣಪೀಠ ಅವರ ಪೀಠ ಆರಂಭಿಸಲಿದೆ.