. ಬಡಾವಣೆಗೆ ಭೂ ಸ್ವಾಧೀ‌ನ ಅಧಿಸೂಚನೆಯೇ ಆಗಿಲ್ಲ. ಕೇವಲ ಪ್ರಾಥಮಿಕ ಅಧಿಸೂಚನೆ ಮಾತ್ರ ಹೊರಡಿಸಲಾಗಿತ್ತು. ಯಡಿಯೂರಪ್ಪ ಸಿಎಂ ಆಗಿದ್ದಾಗ 257.19 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಡಲು ಹೇಳಿದ್ದು ನಿಜ. ಆದ್ರೆ ಅಂದಿನ ಸಿಎಂ ನಿರ್ದೇಶನವನ್ನು ಬಿಡಿಎ ಪಾಲಿಸಲಿಲ್ಲ. ಬಳಿಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದು ಹೋದರೂ. ಆ ಬಳಿಕ ಈ ಎಲ್ಲಾ ಪ್ರಕ್ರಿಯೆಗಳು ನಡೆದಿವೆ. ಹೀಗಿದ್ದಾಗ ಭೂ ಸ್ವಾಧೀನ ಕೈಬಿಟ್ಟ ಪ್ರಕ್ರಿಯೆಯಲ್ಲಿ ಯಡಿಯೂರಪ್ಪ ಪಾತ್ರವೆಲ್ಲಿದೆ? ಎಂದು ಈ ವಾದ ಮಂಡಿಸಿದ ಸಿವಿ ನಾಗೇಶ್ ಎಫ್ಐಆರ್ಗೆ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಿಕೊಂಡರು.
ಡಿನೋಟಿಫೀಕೇಷನ್ ಸುಳಿಯಲ್ಲಿ ಸಿಲುಕಿರುವ ಮಾಜಿ ಸಿಎಂ ಯಡಿಯೂರಪ್ಪ ಬಿಗ್ ರಿಲೀಫ್ ಸಿಕ್ಕಿದೆ. ಸೋಮವಾರದವರೆಗೆ ಎಸಿಬಿ ದಾಖಲು ಮಾಡಿದ್ದ ಎಫ್ಐಆರ್ ಸಂಬಂಧ ಯಾವುದೇ ತನಿಖೆ ನಡೆಸದಂತೆ ಹೈಕೋರ್ಟ್ ಸೂಚನೆ ನೀಡಿದೆ.
ಶಿವರಾಮ ಕಾರಂತ್ ಬಡಾವಣೆ ಡಿನೋಟಿಫಿಕೇಷನ್ ಸುಳಿಯಲ್ಲಿ ಸಿಕ್ಕಿರುವ ಮಾಜಿ ಸಿಎಂ ಯಡಿಯೂರಪ್ಪ ಹೈಕೊರ್ಟ್ ಬಿಗ್ ರಿಲೀಫ್ ನೀಡಿದೆ. ಈ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಯಾವುದೇ ಅಕ್ರಮ ನಡೆದೇ ಇಲ್ಲ ಎಂದು ಯಡಿಯೂರಪ್ಪ ಪರ ವಕೀಲರು ವಾದ ಮಂಡಿಸಿದರು.
ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನ ಹಾಗೂ ಡಿನೋಟಿಫಿಕೇಷನ್ ಸಮಿತಿಯ ತೀರ್ಮಾನದಂತೆ ನಡೆದಿದೆ. ಡಿನೋಟಿಫಿಕೇಷನ್ನಿಂದ ಅಂದಿನ ಸಿಎಂ ಯಡಿಯೂರಪ್ಪ ಭಾರಿ ಲಾಭ ಮಾಡಿಕೊಂಡಿದ್ದಾರೆ ಎಂಬ ಆರೋಪ ಸುಳ್ಳು. ರಾಜ್ಯದ ಬೊಕ್ಕಸಕ್ಕೆ ಯಾವುದೇ ನಷ್ಟ ಆಗಿಲ್ಲ. ಡಿನೋಟಿಫಿಕೇಷನ್ ಸಮಿತಿಯ ತೀರ್ಮಾನದಂತೆ ಸ್ವಾಧೀನ ಕೈಬಿಡಲಾಗಿದೆ. ಅಕ್ರಮವಾಗಿ ಭೂ ಸ್ವಾಧೀನ ಕೈಬಿಟ್ಟಿದ್ದಾರೆ. ಭೂ ಮಾಲೀಕರಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ ಅನ್ನೋ ಆರೋಪ ಮಾಡಲಾಗಿದೆ.
ದೂರುದಾರರು ಭೂಸ್ವಾಧೀನ ಅಧಿಕಾರಿಯಲ್ಲ
ಆದರೆ, ಯಾರಿಂದ ಪಡೆದಿದ್ದಾರೆ, ಹೇಗೆ ಪಡೆದಿದ್ದಾರೆ? ಯಾವ ರೂಪದಲ್ಲಿ ಕಿಕ್ ಬ್ಯಾಕ್ ಬಂದಿದೆ ಎಂಬುದನ್ನು ವಿವರಿಸಿ. ಆರ್ಥಿಕ ಲಾಭ ಮಾಡಿಕೊಂಡಿದ್ದಾರೆ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿದ್ದಾರೆ ಎಂಬ ಆರೋಪ ಇದೆ. ಆದರೆ, ದೂರುದಾರರು ಭೂ ಮಾಲೀಕ ಅಥವಾ ಭೂ ಸ್ವಾಧೀನ ಅಧಿಕಾರಿಯಲ್ಲ. ಅಕ್ರಮ ಭೂ ಸ್ವಾಧೀನ ಕೈ ಬಿಟ್ಟ ಆರೋಪ ಬಿಎಸ್'ವೈ ಮೇಲಿದೆ. ಆದರೆ ಸ್ವಾಧೀನ ಮಾಡಿಕೊಂಡಿರೆ ತಾನೇ ಕೈಬಿಡೋ ಪ್ರಕ್ರಿಯೆ ನಡೆಯೋದು? ಪ್ರಕರಣಕ್ಕೆ ಪ್ರಾಥಮಿಕ ಸಾಕ್ಷ್ಯ, ದಾಖಲೆಗಳೇ ಇಲ್ಲ. ಸರ್ಕಾರ ಮತ್ತು ಎಸಿಬಿ ಕೇವಲ ಮಾನಸಿಕ ಹಿಂಸೆ, ಕಿರುಕುಳ ನೀಡುವ ಉದ್ದೇಶದಿಂದ ಸಂಚು ಮಾಡಿದೆ. ಲಾಭ ಪಡೆಯುವುದು ಅಂದರೆ, ಒತ್ತಡ, ಬೇಡಿಕೆ ಅಥವಾ ಆಗ್ರಹ ಇರಬೇಕು. ಆದರೆ ವಿಶಿಷ್ಟ ಲಾಭವಾಗಲೀ, ಮೌಲ್ಯಯುತ ವಸ್ತುವನ್ನಾಗಲೀ ಯಡಿಯೂರಪ್ಪ ಪಡೆದಿಲ್ಲ. ಬಡಾವಣೆಗೆ ಭೂ ಸ್ವಾಧೀನ ಅಧಿಸೂಚನೆಯೇ ಆಗಿಲ್ಲ. ಕೇವಲ ಪ್ರಾಥಮಿಕ ಅಧಿಸೂಚನೆ ಮಾತ್ರ ಹೊರಡಿಸಲಾಗಿತ್ತು. ಯಡಿಯೂರಪ್ಪ ಸಿಎಂ ಆಗಿದ್ದಾಗ 257.19 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಡಲು ಹೇಳಿದ್ದು ನಿಜ. ಆದ್ರೆ ಅಂದಿನ ಸಿಎಂ ನಿರ್ದೇಶನವನ್ನು ಬಿಡಿಎ ಪಾಲಿಸಲಿಲ್ಲ. ಬಳಿಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದು ಹೋದರೂ. ಆ ಬಳಿಕ ಈ ಎಲ್ಲಾ ಪ್ರಕ್ರಿಯೆಗಳು ನಡೆದಿವೆ. ಹೀಗಿದ್ದಾಗ ಭೂ ಸ್ವಾಧೀನ ಕೈಬಿಟ್ಟ ಪ್ರಕ್ರಿಯೆಯಲ್ಲಿ ಯಡಿಯೂರಪ್ಪ ಪಾತ್ರವೆಲ್ಲಿದೆ? ಎಂದು ಈ ವಾದ ಮಂಡಿಸಿದ ಸಿವಿ ನಾಗೇಶ್ ಎಫ್ಐಆರ್ಗೆ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಿಕೊಂಡರು.
ಸಿಎಂ ಸಿದ್ದರಾಮಯ್ಯ ಅವರಿಂದ ಅಧಿಕಾರ ದುರುಪಯೋಗ
ಇನ್ನು, ಎಸಿಬಿ ಪರ ರವಿವರ್ಮ ಕುಮಾರ್ ವಾದ ಮಂಡಿಸಿದ್ದು, ಎಸಿಬಿಯನ್ನ ಸರ್ಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದರು. ವಕೀಲ ಸಿ.ವಿ. ನಾಗೇಶ್ ಅವರು ಸಿಎಂ ಸಿದ್ದರಾಮಯ್ಯ ಎಸಿಬಿ ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಜಿಯಲ್ಲಿ ನಮೂದಿಸಿದ್ದಾರೆ. ಎಸಿಬಿಯನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿಲ್ಲ. ಹೀಗಾಗಿ ಅರ್ಜಿಯಲ್ಲಿನ ಸಿಎಂ ಕುರಿತ ಪದಗಳನ್ನು ಕೈಬಿಡಬೇಕು. ಎಸಿಬಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಭ್ರಷ್ಟಾಚಾರ ಕಂಡು ಬಂದಿದ್ದರಿಂದ ತನಿಖೆ ಆರಂಭಿಸಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಅಡಗಿಲ್ಲ. ಯಡಿಯೂರಪ್ಪ ಅವರನ್ನು ಅರೆಸ್ಟ್ ಮಾಡುವುದಿಲ್ಲ ವಿಚಾರಣೆ ಹಾಜರಾಗಲಿ. ಅಲ್ಲದೆ, ನಾಳೆ ಹಾಜರಾಗುವಂತೆ ನೀಡಿರುವ ನೋಟಿಸ್ ಅನ್ನು ಹಿಂಪಡೆಯುತ್ತಿದ್ದೇವೆ.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡುತ್ತಿದ್ದು, ಅಲ್ಲಿಯವರೆಗೂ ಪ್ರಕರಣ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದರು. ಮತ್ತೊಂದೆಡೆ ಪ್ರಕರಣದ 2ನೇ ಆರೋಪಿ ಬಸವರಾಜೇಂದ್ರಗೆ ಆಗಸ್ಟ್ 31ರವರೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಈ ಮೂಲಕ ಪ್ರಕರಣದ ಆರೋಪಿಗಳು ತಾತ್ಕಾಲಿಕ ರಿಲೀಫ್ ಪಡೆದಿದ್ದಾರೆ. ಸೋಮವಾರ ನಡೆಯಲಿರುವ ವಿಚಾರಣೆಯಲ್ಲಿ ಯಾವ ಆದೇಶ ಹೊರ ಬೀಳುತ್ತೆ ಅನ್ನೋದು ಸದ್ಯದ ಕುತೂಹಲ...
- ರಮೇಶ್, ಸುವರ್ಣ ನ್ಯೂಸ್
