135 ಕಡತಗಳು ನಾಪತ್ತೆಯಾಗಿವೆ ಹಾಗೂ ವರದಿ ಸಿದ್ಧಪಡಿಸುವಾಗ ಅಧಿಕಾರಿಗಳಿಂದ ಸಹಕಾರ ಸಿಗಲಿಲ್ಲ. ಹೀಗಾಗಿ ಪೂರ್ಣ ವರದಿ ನೀಡಲು ಆಗಲಿಲ್ಲ ಎಂದು  ಶಾಸಕ ವಿಶ್ವನಾಥ್ ಹೇಳಿದ್ದಾರೆ.

ಬೆಳಗಾವಿ (ಡಿ.01): ಒತ್ತಡ, ಬೆದರಿಕೆ ಆಮಿಷಗಳ ನಡುವೆ ಪ್ರಾಮಾಣಿಕ ವರದಿ ನೀಡಿದ್ದೇವೆ ಎಂದು ವಿಧಾನಸಭೆಯಲ್ಲಿ ಎಸ್. ಆರ್. ವಿಶ್ವನಾಥ್ ಹೇಳಿದ್ದಾರೆ.

2178 ಎಕರೆ ಭೂಮಿ ಬೇನಾಮಿ ಹೆಸರಿನಲ್ಲಿದ್ದು, ಭೂಸ್ವಾಧೀನದಿಂದ ಕೈಬಿಡುವಲ್ಲಿ ದೊಡ್ಡ ಹಗರಣವೂ ನಡೆದಿದೆ ಎಂದು ಅವರು ಹೇಳಿದರು.

ಮುಂದುವರೆದು, 135 ಕಡತಗಳು ನಾಪತ್ತೆಯಾಗಿವೆ ಹಾಗೂ ವರದಿ ಸಿದ್ಧಪಡಿಸುವಾಗ ಅಧಿಕಾರಿಗಳಿಂದ ಸಹಕಾರ ಸಿಗಲಿಲ್ಲ. ಹೀಗಾಗಿ ಪೂರ್ಣ ವರದಿ ನೀಡಲು ಆಗಲಿಲ್ಲ ಎಂದು ಅವರು ಹೇಳಿದ್ದಾರೆ.

 ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಸಿ.ಟಿ ರವಿ, ಚಾರ್ಲ್ಸ್ ಶೋಭರಾಜ್’ನೇ ಅತೀ ದೊಡ್ಡ ಕ್ರಿಮಿನಲ್ ಅಂದ್ಕೊಂಡಿದ್ವಿ, ಆದರೆ ಇವರು ಅವನಿಗಿಂತ ದೊಡ್ಡ ಕ್ರಿಮಿನಲ್ ಎಂದು ಹೇಳಿದ್ದಾರೆ.