500 ಹಾಗೂ 1000 ರೂಪಾಯಿ ನೋಟುಗಳ ಬ್ಯಾನ್‌ನಿಂದಾಗಿ ಈಗ ಜನ ದುಡ್ಡು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಆದರೆ  ಇನ್ಮುಂದೆ ಹಣಕ್ಕಾಗಿ ಬ್ಯಾಂಕ್, ಎಟಿಎಂ ಮುಂದೆ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ.

ಬೆಂಗಳೂರು (ನ.23): 500 ಹಾಗೂ 1000 ರೂಪಾಯಿ ನೋಟುಗಳ ಬ್ಯಾನ್‌ನಿಂದಾಗಿ ಈಗ ಜನ ದುಡ್ಡು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಆದರೆ ಇನ್ಮುಂದೆ ಹಣಕ್ಕಾಗಿ ಬ್ಯಾಂಕ್, ಎಟಿಎಂ ಮುಂದೆ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್ ಬಜಾರನಲ್ಲೂ ಹಣ ಸಿಗುತ್ತೆ. ನಿಮಗೆ ಹಣದ ಅಗತ್ಯವಿದ್ದರೆ ಬಿಗ್ ಬಜಾರ್ ಮಳಿಗೆಗೆ ತೆರಳಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿದ್ರೆ 2000 ರೂ. ಹಣವನ್ನು ಪಡೆಯಬಹುದು. ಬಿಗ್ ಬಜಾರ್ ಸಿಇಒ ಕಿಶೋರ್ ಬಿಯಾನಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಗುರುವಾರದಿಂದ ಬಿಗ್ ಬಜಾರ್ ಮಳಿಗೆಯಲ್ಲಿ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿ ಹಣ ಪಡೆಯಬಹುದು. ಬಿಗ್ ಬಜಾರ್ ಮಳಿಗೆಯ ಕ್ಯಾಷ್ ಕೌಂಟರ್ ಗೆ ತೆರಳಿ ನೀವು ಈ ಸೌಲಭ್ಯ ಪಡೆಯಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಅವರು ಬಿಗ್ ಬಜಾರ್‍ನಲ್ಲಿ 2 ಸಾವಿರ ರೂ. ನಗದು ಹಣ ಪಡೆಯಲು ಏನು ಮಾಡಬೇಕೆಂದು ಟಿಟ್ವರ್​ ಮೂಲಕ ವಿವರಿಸಿದ್ದಾರೆ.