ವ್ಯಾಪಾರ ವಹಿವಾಟು ಶೇ.60 ರಷ್ಟು ಕುಸಿದಿದೆ. ಅದರಲ್ಲೂ ಹೋಟೆಲ್​ ಉದ್ಯಮ ಸಂಪೂರ್ಣ ನಷ್ಟ ಅನುಭವಿಸುತ್ತಿದೆ. ಚಿಲ್ಲರೆ ತೊಂದರೆಯಿಂದಾಗಿ ವ್ಯಾಪಾರ ಆಗ್ತಾ ಇಲ್ಲ.

ಬೀದರ್ (ನ.17): ಎಲ್ಲವೂ ಒಳ್ಳೆಯದೇ ಆಗಲ್ಲ. ಬೀದರ್​ನಲ್ಲಿ ನೋಟು ನಿಷೇಧದ ಎಫೆಕ್ಟ್​ ವ್ಯಾಪಾರಿಗಳಿಗೆ ತಟ್ಟಿದೆ.

ವ್ಯಾಪಾರ ವಹಿವಾಟು ಶೇ.60 ರಷ್ಟು ಕುಸಿದಿದೆ. ಅದರಲ್ಲೂ ಹೋಟೆಲ್​ ಉದ್ಯಮ ಸಂಪೂರ್ಣ ನಷ್ಟ ಅನುಭವಿಸುತ್ತಿದೆ. ಚಿಲ್ಲರೆ ತೊಂದರೆಯಿಂದಾಗಿ ವ್ಯಾಪಾರ ಆಗ್ತಾ ಇಲ್ಲ.

ಮಾಡಿದ ಅಡುಗೆ ಗ್ರಾಹಕರಿಲ್ಲದೆ ಬಿಸಾಡುವಂಥ ಪರಿಸ್ಥಿತಿ ಬಂದೊದಗಿದೆ. ರೂ.2000 ನೋಟು ಚಲಾವಣೆಯಲ್ಲಿದ್ದರೂ, ಚಿಲ್ಲರೆ ಇಲ್ಲದೆ ಪರದಾಡುವಂತಾಗಿದೆ. ಇನ್ನೂ ಕೆಲವು ಕಡೆ ಕೈ ಸಾಲ ಮಾಡಿ ಹೋಟೆಲ್​ ನಡೆಸಲಾಗುತ್ತಿದೆ.

(ಸಾಂದರ್ಭಿಕ ಚಿತ್ರ)