ರಾಜ್ಯದ ಹಲವು ಭಾಗಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದರೂ ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ಭೀಕರ ಬರಗಾಲ ಎದುರಿಸುತ್ತಿರುವ ಇಲ್ಲಿನ ಜನರು ತೆರೆದ ಬಾವಿಗಳಲ್ಲಿ ನೀರು ಎತ್ತಲು ಗುದ್ದಾಡುವಂತಾಗಿದೆ. ಸಾವಿನ ಭಯವನ್ನೂ ತೊರೆದು ಬಾವಿಯಲ್ಲಿ ಸರ್ಕಸ್‌ ಮಾಡಿ ನೀರು ಪಡೆಯುವಂತಾಗಿದೆ.

ಔರಾದ್‌ : ರಾಜ್ಯದ ಹಲವು ಭಾಗಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದರೂ ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ಭೀಕರ ಬರಗಾಲ ಎದುರಿಸುತ್ತಿರುವ ಇಲ್ಲಿನ ಜನರು ತೆರೆದ ಬಾವಿಗಳಲ್ಲಿ ನೀರು ಎತ್ತಲು ಗುದ್ದಾಡುವಂತಾಗಿದೆ. ಸಾವಿನ ಭಯವನ್ನೂ ತೊರೆದು ಬಾವಿಯಲ್ಲಿ ಸರ್ಕಸ್‌ ಮಾಡಿ ನೀರು ಪಡೆಯುವಂತಾಗಿದೆ.

ಈ ಭಾಗದ ಹೆಚ್ಚಿನ ಭಾಗಗಳಲ್ಲಿ ನೀರು ತಳ ತಲುಪಿದೆ. ತಾಲೂಕಿನ ಚಿಮ್ಮೇಗಾಂವ್‌ ತಾಂಡಾದಲ್ಲಿ ನೀರಿನ ಸಮಸ್ಯೆ ಹೇಳ ತೀರದಾಗಿದೆ. ಹೀಗಾಗಿ ನೀರು ಇರುವ ಬಾವಿಗಳಿಗೆ ಕಿ.ಮೀ.ಗಟ್ಟಲೆ ನಡೆದು ಹೋಗುತ್ತಿದ್ದಾರೆ. ಅಬಾಲವೃದ್ಧರೆನ್ನದೇ ಜನರು ಹಗ್ಗಗಳನ್ನು ಬಾವಿಗಿಳಿಸಿ, ಇತರರೊಂದಿಗೆ ಸೆಣಸಾಡಿ ನೀರು ಪಡೆಯಬೇಕಾಗಿದೆ. ಈ ನಡುವೆ ನೀರು ಎಲ್ಲಿ ಖಾಲಿಯಾಗುತ್ತೋ ಎಂಬ ಆತಂಕದಿಂದ ಕೆಲವು ಯುವಕರು ಬಾವಿಯೊಳಗೆ ನಿಂತು ತಮ್ಮ ಕುಟುಂಬದವರಿಗೆ ಸಹಾಯ ಮಾಡುವುದು ಸರ್ವೇಸಾಮಾನ್ಯವಾಗಿದೆ.

ತಾಲೂಕಿನ ದಾಪಕಾ, ಕಮಲನಗರ, ಚಿಂತಾಕಿ, ಸಂತಪೂರ ಹೋಬಳಿಗಳಲ್ಲೂ ನೀರಿನ ಸಮಸ್ಯೆ ವ್ಯಾಪ​ಕ​ವಾ​ಗಿದೆ. ಕೆಲವು ಬಾವಿ​ಗ​ಳಂತೂ 55ರಿಂದ 100 ಅಡಿಗೂ ಅಧಿಕ ಆಳ​ವಿದ್ದು ಒಂದು ಹಂತದ ಬಳಿಕ ಮೋಟಾರು ಪಂಪು​ಗಳಿಗೂ ನೀರು ಮೇಲೆ​ತ್ತುವ ಸಾಮ​ರ್ಥ್ಯ​ ಇರು​ವು​ದಿ​ಲ್ಲ. ​ಪರಿ​ಸ್ಥಿತಿ ಇಷ್ಟುಶೋಚ​ನೀ​ಯ​ವಾ​ಗಿ​ದ್ದ​ರೂ ಅಧಿಕಾರಿಗಳು ಹಾಗೂ ಜನಪ್ರನಿಧಿಗಳು ತಮಗೂ ಇದ​ಕ್ಕೂ ಸಂಬಂಧವಿಲ್ಲವೆಂಬಂತೆ ನಿರ್ಲಕ್ಷ್ಯ ತೋರುತಿದ್ದಾರೆ ಎಂಬುದು ನಾಗ​ರಿ​ಕರ ಅಳ​ಲು.

ರಾಜ್ಯದ ಹೆಚ್ಚಿನ ಪ್ರದೇ​ಶ​ಗಳು ಮುಂಗಾರು ಪೂರ್ವ ಮಳೆ​ಯಲ್ಲಿ ತೊಯ್ದ​ರೂ ಈಗಾ​ಗಲೇ ಮುಂಗಾರು ಪ್ರವೇ​ಶಿ​ಸಿ​ದ್ದರೂ ಬೀದರ್‌ ಜಿಲ್ಲೆ​ಯ ಔರಾದ್‌ ತಾಲೂ​ಕಿ​ನಲ್ಲಿ ಮಾತ್ರ ಜೀವ​ಜ​ಲ​ಕ್ಕಾಗಿ ಪರ​ದಾ​ಟ ಮುಂದು​ವ​ರಿ​ದಿದೆ. ನೀರಿನ ಬರ​ವನ್ನು ಎದು​ರಿಸುತ್ತಿ​ರುವ ಇಲ್ಲಿನ ಕೆಲ ಪ್ರದೇ​ಶ​ಗ​ಳ ಜನರು ಹತ್ತಾರು ಕಿ.ಮೀ. ನಡೆಯಬೇ​ಕಾದ ಪರಿ​ಸ್ಥಿತಿ ಇದೆ. ಅಷ್ಟುದೂರ ನಡೆದು ಆಳದ ಬಾವಿ​ಗಿಳಿದರೂ ನೀರು ಸಿಕ್ಕೇ ಸಿಗು​ತ್ತದೆ ಎಂಬು​ದಕ್ಕೆ ಯಾವುದೇ ಖಾತ್ರಿ ಇರು​ವು​ದಿಲ್ಲ.