ಅಪಘಾತವಾದ ವ್ಯಕ್ತಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಜಿಲ್ಲಾಧಿಕಾರಿ

First Published 17, Mar 2018, 12:42 PM IST
Bidar DC Humanity
Highlights

ಮಾನವೀಯತೆ ಮರೆದ ಬೀದರ್ ಜಿಲ್ಲಾಧಿಕಾರಿ ಎಚ್.ಮಹದೇವಪ್ಪ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಜೀವ ಉಳಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಮಹದೇವಪ್ಪ ಅವರು ತಮ್ಮ ಜೊತೆಗೆ ಇದ್ದ  ಅಧಿಕಾರಿಗಳ ಸಹಾಯದಿಂದ ಸರ್ಕಾರಿ ವಾಹನದಲ್ಲಿ ಗಾಯಾಳುವನ್ನು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೀದರ್ : ಮಾನವೀಯತೆ ಮರೆದ ಬೀದರ್ ಜಿಲ್ಲಾಧಿಕಾರಿ ಎಚ್.ಮಹದೇವಪ್ಪ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಜೀವ ಉಳಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಮಹದೇವಪ್ಪ ಅವರು ತಮ್ಮ ಜೊತೆಗೆ ಇದ್ದ  ಅಧಿಕಾರಿಗಳ ಸಹಾಯದಿಂದ ಸರ್ಕಾರಿ ವಾಹನದಲ್ಲಿ ಗಾಯಾಳುವನ್ನು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಂಬುಲೆನ್ಸ್’ಗೆ ಕರೆ ಮಾಡಿದರೂ ಕೂಡ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯೇ ಬಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೇ ಈ ವೇಳೆ ಅಪಘಾತಕ್ಕೆ ಈಡಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಲು ವಿಳಂಭ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಸ್ಪತ್ರೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಈ ವೇಳೆ ಡಿಎಚ್’ಒಗೆ ಸೂಚನೆ ನೀಡಿದ್ದಾರೆ.

ಇಲ್ಲಿನ ಮನ್ನಳ್ಳಿ - ಅಲಿಯಾಬಾದ್ ಬಳಿ ವ್ಯಕ್ತಿ ಅಪಘಾತದಲ್ಲಿ ಗಾಯಗೊಂಡು ಒದ್ದಾಡುತ್ತಾ ಬಿದ್ದಿದ್ದ ಎನ್ನಲಾಗಿದೆ. ಯದ್ಲಾಪುರ ಗ್ರಾಮದ ಶಿವಕುಮಾರ್ ಎನ್ನುವಾತನೇ ಅಪಘಾತದಲ್ಲಿ ಗಾಯಗೊಂಡವನೆಂದು ಗುರುತಿಸಲಾಗಿದೆ.

loader