ಬೀಜಿಂಗ್[ಜ.05]: ಕಾರು ಮತ್ತು ಸೈಕಲ್‌ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವ ವಿಚಿತ್ರ ಘಟನೆಗೆ ಚೀನಾದ ನಗರವೊಂದರಲ್ಲಿ ನಡೆದಿದೆ. ಇದನ್ನು ನಂಬಲು ಅಸಾಧ್ಯವಾದರೂ, ಫೋಟೋ ಮಾತ್ರ ಸತ್ಯ ಎನ್ನುತ್ತಿದೆ.

ದಕ್ಷಿಣ ಚೀನಾದ ಶೆಂಝೆನ್‌ ನಗರದಲ್ಲಿ ಕಾರಿಗೆ ಸೈಕಲ್‌ ಗುದ್ದಿದ ರಭಸಕ್ಕೆ ಕಾರಿನ ಬಂಪರ್‌ ಪೂರ್ತಿ ನಿಖಲ್‌ ಆಗಿದೆ. ಆದರೆ, ಸೈಕಲ್‌ಗೆ ಯಾವುದೇ ಹಾನಿಯಾಗದಿರುವುದನ್ನು ಕಂಡು ನೆಟ್ಟಿಗರ್‌ ಆಶ್ಚರ್ಯಚಕಿತರಾಗಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ಈ ಫೋಟೋವನ್ನು ಹಲವರು ಫೋಟೋಶಾಪ್‌ ಎಂದುಕೊಂಡಿದ್ದರು. ಆದರೆ, ಕೊನೆಗೆ ಇದೊಂದು ನೈಜ ಘಟನೆ ಎಂಬುದು ಖಚಿತವಾಗಿದೆ.