ಆಧಾರ್ ನೋಂದಣಿ ಇಲ್ಲದಿದ್ದರೆ ಮಕ್ಕಳ ಡಿಸ್ಚಾರ್ಜ್ ಇಲ್ಲ..!

Bhopal hospital refuses to discharge newborns sans Aadhaar
Highlights

ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ, ಆಧಾರ್ ನೋಂದಣಿ ಇಲ್ಲದ ಕಾರಣಕ್ಕಾಗಿ ನವಜಾತು ಶಿಶುವನ್ನು ಬಿಡುಗಡೆ ಮಾಡಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ.

ಭೋಪಾಲ್: ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ, ಆಧಾರ್ ನೋಂದಣಿ ಇಲ್ಲದ ಕಾರಣಕ್ಕಾಗಿ ನವಜಾತು ಶಿಶುವನ್ನು ಬಿಡುಗಡೆ ಮಾಡಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ.

ರಾಜಧಾನಿ ಭೋಪಾಲ್‌ನಲ್ಲಿರುವ ಸುಲ್ತಾನಿಯಾ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಿಗೆ, ಇಲ್ಲಿಯೇ ಆಧಾರ್ ನೋಂದಣಿ ಮಾಡಿಕೊಡಲಾಗುತ್ತದೆ.

ಆದರೆ, ಉದ್ದದ ಸಾಲು ಇರುವ ಕಾರಣ ಕೆಲ ಬಾಣಂತಿಯರಿಗೆ ತಮ್ಮ ಮಕ್ಕಳ ಆಧಾರ್ ನೋಂದಣಿ ಸಾಧ್ಯವಾಗುವುದಿಲ್ಲ. ಈ ನಡುವೆ, ಆಸ್ಪತ್ರೆಯಲ್ಲಿನ ಅಧಿಕಾರಿಗಳು, ‘ಆಧಾರ್ ನೋಂದಣಿ ಸಂಖ್ಯೆ ಸಲ್ಲಿಸದಿದ್ದರೆ, ನವಜಾತ ಶಿಶುವಿನ ಬಿಡುಗಡೆಗೆ ಅಗತ್ಯವಿರುವ ಚೀಟಿ ವಿತರಿಸಲ್ಲ,’ ಎಂದು ತಿಳಿಸಿದ್ದಾರೆ.

loader