ಪತ್ರಕರ್ತ ರವಿ ಬೆಳಗೆರೆ ಬಂಧನ ವಿಚಾರವಾಗಿ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ.  ಈ ಬಗ್ಗೆ ನನಗೆ  ಒಂದೂವರೆ ಗಂಟೆ ಹಿಂದೆ ವಿಷಯ ಗೊತ್ತಾಗಿದೆ.

ಬೆಂಗಳೂರು (ಡಿ.08): ಪತ್ರಕರ್ತ ರವಿ ಬೆಳಗೆರೆ ಬಂಧನ ವಿಚಾರವಾಗಿ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ. ಈ ಬಗ್ಗೆ ನನಗೆ ಒಂದೂವರೆ ಗಂಟೆ ಹಿಂದೆ ವಿಷಯ ಗೊತ್ತಾಗಿದೆ.

ನಾನು ಬೆಂಗಳೂರಲ್ಲಿ ಇಲ್ಲ. ಹೀಗಾಗಿ ತಡವಾಗಿ ವಿಷಯ ತಿಳಿದಿದೆ. ತಂದೆಯ ಮನೆಯಲ್ಲಿ ಬಂದೂಕು ಸಿಕ್ಕಿರುವುದು ನಿಜ. ಆದರೆ ನನ್ನ ತಂದೆ ಕೊಲೆಗೆ ಸುಪಾರಿ ಕೊಟ್ಟಿರುವುದು ಸುಳ್ಳು. ಯಾವ ಆಧಾರದಲ್ಲಿ ಸುಪಾರಿ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ? ಫೇಸ್​​ಬುಕ್ ಸ್ಟೇಟಸ್​'​ಗೂ ಕೊಲೆ ಸುಪಾರಿಗೂ ಸಂಬಂಧ ಇಲ್ಲ. ಸುನೀಲ್​ ಕೊಲೆ ಮಾಡಬೇಕಿದ್ದರೆ ಮತ್ತೆ ಕಚೇರಿಗೆ ಬರಬೇಕಿರಲಿಲ್ಲ. ನಿನ್ನೆಯೂ ಸಹ ಸುನೀಲ್​ ಹೆಗ್ಗರವಳ್ಳಿ ಕಚೇರಿಗೆ ಬಂದಿದ್ದಾರೆ. ಹೆಗ್ಗರವಳ್ಳಿ ಕೂಡ ನಮ್ಮ ತಂದೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂದು ಭಾವನಾ ಹೇಳಿದ್ದಾರೆ. 

ಗೌರಿ ಹತ್ಯೆ ಕೇಸ​ನ್ನು ಡೈವರ್ಟ್​ ಮಾಡಲು ಮಾಡುತ್ತಿದ್ದಾರೋ ಗೊತ್ತಿಲ್ಲ. ನಮ್ಮ ತಂದೆ ಹಾಗೂ ಹೆಗ್ಗರವಳ್ಳಿ ನಡುವೆ ಸಣ್ಣ ಮನಸ್ತಾಪ ಇತ್ತು. ಸುನೀಲ್​ ಹೆಗ್ಗರವಳ್ಳಿ ನಮ್ಮ ಫ್ಯಾಮಿಲಿಯವರಲ್ಲಿ ಒಬ್ಬನಾಗಿದ್ದ. ಮತ್ತೆ ಬರವಣಿಗೆಯಲ್ಲಿ ತೊಡಗಿದ್ದಾರೆ ಎಂಬ ಖುಷಿಯಲ್ಲಿ ನಾವಿದ್ದೆವು. ಗೌರಿ ಹತ್ಯೆ ಕೇಸ್'​​ನ ಮಧ್ಯೆ ಸೇರಿಸಲು ನಡೆಸಿರುವ ಕುತಂತ್ರ ಎಂದು ಸುವರ್ಣನ್ಯೂಸ್​ಗೆ ರವಿ ಬೆಳಗೆರೆ ಹೇಳಿದ್ದಾರೆ.

ಈ ವಿಷಯ ಕೇಳಿ ನನಗೆ ಶಾಕ್​ ಆಗಿದೆ. ಅವರು ನನ್ನ ಮಾವ. ಈ ರೀತಿ ಕೆಲಸ ಮಾಡುವವರಲ್ಲ. ನಮ್ಮ ಇಡೀ ಕುಟುಂಬ ರವಿ ಬೆಳಗೆರೆ ಬೆಂಬಲಕ್ಕೆ ಇದೆ. ಕಾನೂನು ಹೋರಾಟ ನಡೆಸುತ್ತೇನೆ ಎಂದು ಅಳಿಯ ಶ್ರೀನಗರ ಕಿಟ್ಟಿ ಹೇಳಿದ್ದಾರೆ.