ಕಾರವಾರ/ ಉಡುಪಿ[ಮಾ. 31] ಮನೆಯಲ್ಲಿ ತಾಯಿ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನೆ ಬಿಟ್ಟು ಬಂದಿದ್ದ ಭಟ್ಕಳದ ವಿದ್ಯಾರ್ಥಿಯೊಬ್ಬನನ್ನು ರೈಲ್ವೆ ಪೊಲೀಸರು ರಕ್ಷಿಸಿ, ತಾಯಿಗೆ ಒಪ್ಪಿಸಿದ್ದಾರೆ.

ಭಟ್ಕಳದ ಸೋನಾರ್ಕೇರಿ ಆಂಗ್ಲ ಮಾಧ್ಯಮ ಸಾಲೆಯ 9ನೇ ತರಗತಿ ವಿದ್ಯಾರ್ಥಿ ತಾಯಿಯ ಬಳಿ ಮೊಬೈಲು ಕೊಡಿಸುವಂತೆ ಪೀಡಿಸಿದ್ದ, ತಾಯಿ ಮೊದಲು ಚೆನ್ನಾಗಿ ಓದು ಎಂದು ಬುದ್ದಿವಾದ ಹೇಳಿದ್ದರು.  ಅಷ್ಟಕ್ಕೆ ಸಿಟ್ಟುಗೊಂಡ ಆತ ಮಾ.29ರಂದು ಮನೆಯಲ್ಲಿ ಹೇಳದೇ ರೈಲು ಹತ್ತಿ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದ.

ಉಡುಪಿಯಲ್ಲಿ ಪತ್ತೆಯಾದ ಮಲೆನಾಡ ಹಾರುವ ಹಾವು

ಮಾ.30ರಂದು ರೈಲ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ ಗಾಂವ್ಕಾರ್ ಮತ್ತು ಮುಖ್ಯಪೇದೆ ವೇಣು ಸಿ.ಎಚ್. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬರುವ ರೈಲುಗಳನ್ನು ಅವಲೋಕಿಸುತ್ತಿದ್ದಾಗ, ಸಂಜೆ 6.30ಕ್ಕೆ ನಿಲ್ದಾಣದಲ್ಲಿ ಕರ್ತವ್ಯ ನಡೆಸುತ್ತಿದ್ದಾಗ ಈ ಬಾಲಕ ಪ್ಲಾಟ್ ಫಾರ್ಮ್ ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿರುವುದು ಕಂಡಬಂತು. ಆತನನ್ನು ವಿಚಾರಿಸಿದಾಗ ಆತ ಆಸ್ಪತ್ರೆಯಲ್ಲಿರುವ ತನ್ನ ಗೆಳೆಯನನ್ನು ನೋಡುವುದಕ್ಕೆ ಬಂದಿದ್ದೇನೆ ಎಂದು ಹೇಳಿದ್ದ, ಆತನ ಉತ್ತರದಿಂದ ಸಂಶಯಗೊಂಡು, ಕಚೇರಿಗೆ ಕರೆದೊಯ್ಧು ವಿಚಾರಿಸಿದಾಗ ಮೊಬೈಲ್ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.

ನಂತರ ಆತನ ಶಾಲೆಯ ಶಿಕ್ಷಕರಲ್ಲಿ ವಿಚಾರಿಸಿ, ಅವರ ಮೂಲಕ ತಾಯಿಗೆ ಮಾಹಿತಿ ನೀಡಲಾಯಿತು. ಹುಡುಗನ ತಾಯಿ 2 ವರ್ಷಗಳ ಹಿಂದೆ ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡಿದ್ದು, ಈಗ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಆಕೆ 2 ದಿನಗಳ ಕಾಲ ಕಾಣೆಯಾದ ಮಗನನ್ನು ಎಲ್ಲಾ ಕಡೆ ಹುಡುಕಿ ಪತ್ತೆಯಾಗಿ ಕಂಗಾಲಾಗಿದ್ದರು. 

26 ವರ್ಷ ತಲೆಮರೆಸಿಕೊಂಡಿದ್ದವ ಉಡುಪಿ ಪೊಲೀಸರ ಕೈಗೆ ಸಿಕ್ಕಿಬಿದ್ದ ರೋಚಕ ಕತೆ

ಆತ ಉಡುಪಿಯಲ್ಲಿರುವ ಮಾಹಿತಿ ಸಿಕ್ಕಿದ ಕೂಡಲೇ ಅವರು ಬಹಳ ಸಂತೋಷಪಟ್ಟರೂ, ತಕ್ಷಣ ಉಡುಪಿಗೆ ಬರುವುದಕ್ಕೆ ಇನ್ನೊಬ್ಬ ಮಗ ಬಹಳ ಚಿಕ್ಕವನಾಗಿದ್ದು, ರೈಲ್ವೆ ಪೊಲೀಸರಿಗೆ ಮನವಿ ಮಾಡಿಕೊಂಡ ನಂತರ ಭಾನುವಾರ ಉಡುಪಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ರೈಲ್ಪೆಯ ಪ್ರಾದೇಶಿಕ ಪ್ರಬಂಧಕ ವಿನಯಕುಮಾರ್ ಮತ್ತು ವಿಭಾಗ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣನಮೂರ್ತಿ ಅವರು ಉಪಸ್ಥಿತರಿದ್ದರು.