Asianet Suvarna News Asianet Suvarna News

ಸಾವರ್ಕರ್ ಭಾರತ ರತ್ನಕ್ಕೆ ಜಿದ್ದಾಜಿದ್ದಿ: ಓದಿ ಇಂದಿನ ಟಾಪ್ 10 ಸುದ್ದಿ!

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ಸಾರವರಿತು ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಅ.17ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

Bharat Ratna To VD Savarkar To Anil Kuymble Birthday Top 10 Stories Of October 17
Author
benga, First Published Oct 17, 2019, 4:45 PM IST
  • Facebook
  • Twitter
  • Whatsapp

ಬೆಂಗಳೂರು(ಅ.17): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ.  ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ತಿವಾರಿ ಟು ಒವೈಸಿ: ಸಾವರ್ಕರ್ ‘ಭಾರತ’ ವಿರೋಧಿಸುವ ‘ರತ್ನ’ಗಳು!

Bharat Ratna To VD Savarkar To Anil Kuymble Birthday Top 10 Stories Of October 17

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ಅಧಿಕಾರಕ್ಕೆ ಬಂದರೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಭರವಸೆ ನೀಡಿದೆ.  ಬಿಜೆಪಿಯ ಈ ನಿರ್ಧಾರ ದೇಶದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ದು, ಸಾವರ್ಕರ್’ಗೆ ಭಾರತ ರತ್ನ ನೀಡುವ ನಿರ್ಧಾರವನ್ನು ವಿಪಕ್ಷಗಳು ಟೀಕಿಸಿವೆ.

2. 956 ವಿಕೆಟ್ ಸರದಾರ ಅನಿಲ್ ಕುಂಬ್ಳೆ @49

Bharat Ratna To VD Savarkar To Anil Kuymble Birthday Top 10 Stories Of October 17

ಕ್ರಿಕೆಟ್ ಜಗತ್ತು ಕಂಡ ಜಂಟಲ್ ಮನ್ ಕ್ರಿಕೆಟಿಗ, ಭಾರತ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ 49ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕುಂಬ್ಳೆ ಸಾಧನೆಯ ಪಕ್ಷಿನೋಟ ಇಲ್ಲಿದೆ ನೋಡಿ.

3. 32, 34: ರಾಜ್ಯದ ಜಿಲ್ಲೆಗಳೆಷ್ಟು ತಿಳಿಯದೆ ಒದ್ದಾಡಿದ ಬಿಜೆಪಿ ರಾಜ್ಯಾಧ್ಯಕ್ಷ!

Bharat Ratna To VD Savarkar To Anil Kuymble Birthday Top 10 Stories Of October 17
ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಹೇಳಿಕೆಗಳಿಂದ ಪದೇ ಪದೇ ಮುಜುಗರಕ್ಕೀಡಾಗುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದು ತಿಳಿಯದೆ ಎಡವಟ್ಟು ಮಾಡಿಕೊಂಡಿದ್ದಾರೆ.

4. ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ ಶಶಿ ತರೂರ್!

Bharat Ratna To VD Savarkar To Anil Kuymble Birthday Top 10 Stories Of October 17
ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ್ದಾರೆ. ಸೆರ್ಬಿಯಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಭಾರತದ ಸಂಸತ್ತಿನ ನಿಯೋಗದ ಪರವಾಗಿ ಮಾತನಾಡಿದ ಶಶಿ ತರೂರ್​, ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಹೇಳುತ್ತಿರುವ ಸುಳ್ಳುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

5. ಶಹಬ್ಬಾಸ್ ಅಫ್ಘಾನಿಸ್ತಾನ್: ಕೊಟ್ಟ ಏಟಿಗೆ ಮಕಾಡೆ ಮಲಗಿದ ಪಾಪಿಸ್ತಾನ್!

Bharat Ratna To VD Savarkar To Anil Kuymble Birthday Top 10 Stories Of October 17
ತನ್ನ ನೆಲದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಏಟು ನೀಡುವ ಸರದಿ ಅಫ್ಘಾನಿಸ್ತಾನ್’ದ್ದು. ಪಾಕಿಸ್ತಾನದಿಂದ ಆಮದಾಗುವ ಹಣ್ಣು-ತರಕಾರಿಗಳ ಮೇಲಿನ ಸುಂಕ ಹೆಚ್ಚಿಸಲು ಆಫ್ಘನ್ ಮುಂದಾಗಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ, ತನ್ನ ಹಣ್ಣು-ತರಕಾರಿ ಮೇಲಿನ ಆಮದು ಸುಂಕ ಹೆಚ್ಚಿಸಲಿರುವ ಆಫ್ಘನ್ ಶಾಕ್ ತಡೆದುಕೊಳ್ಳುವುದು ಅನಿವಾರ್ಯವಾಗಲಿದೆ.

6. ಮಾರುಕಟ್ಟೆಯಲ್ಲಿ ದರ್ಶನ್ ಶರ್ಟ್; ಅಭಿಮಾನಿಯಾದ್ರೆ ಇಲ್ಲಿ ಕೊಳ್ಳಿ!

Bharat Ratna To VD Savarkar To Anil Kuymble Birthday Top 10 Stories Of October 17
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾಗಳನ್ನು ನೋಡಿ ಒಂದಷ್ಟು ಜನ ಅಭಿಮಾನಿಗಳಿದ್ದರೆ, ಸಾಮಾಜಿಕ ಕಳಕಳಿಗೆ ಇನ್ನೊಂದಿಷ್ಟು ಅಭಿಮಾನಿಗಳಿದ್ದಾರೆ. ಒಂದಷ್ಟು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಅಭಿಮಾನ ಮೆರೆದಿದ್ದಾರೆ. ದರ್ಶನ್ ಚಿತ್ರವಿರುವ ಶರ್ಟನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ. ಈ ಶರ್ಟ್ ಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಅಭಿಮಾನಿಗಳು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ.

7. ಚಾಮುಂಡಿ ಚಾಲೆಂಜ್‌ಗೆ ಬಿಗ್ ಟ್ವಿಸ್ಟ್ ಕೊಟ್ಟ ಅನರ್ಹ ಶಾಸಕ ವಿಶ್ವನಾಥ್!

Bharat Ratna To VD Savarkar To Anil Kuymble Birthday Top 10 Stories Of October 17
ಚಾಮುಂಡಿ ಚಾಲೆಂಜ್‌ಗೆ ಅನರ್ಹ ಶಾಸಕ ವಿಶ್ವನಾಥ್ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಸಾರಾ ಮಹೇಶ್‌ಗೆ ಸವಾಲೆಸೆದಿರುವ ವಿಶ್ವನಾಥ್ ಆಣೆ ಪ್ರಮಾಣ ಏನಿಲ್ಲ. ಖರೀದಿ ಮಾಡಿದವರನ್ನು ಕರೆದುಕೊಂಡು ಬರಲಿ ಎಂದಿದ್ದಾರೆ.

8. ಬಡತನ ಹೋಗಲಾಡಿಸಿದರೂ ನಮಗೆ ನೊಬೆಲ್‌ ಇಲ್ಲ: ಚೀನಾ ಅಳಲು

Bharat Ratna To VD Savarkar To Anil Kuymble Birthday Top 10 Stories Of October 17
ಭಾರತದ ವಿರುದ್ಧ ಸದಾ ವಕ್ರ ದೃಷ್ಠಿಯಿಂದ ನೋಡುವ ಚೀನಾ, ಬಡತನ ನಿರ್ಮೂಲನೆ ಪ್ರಯತ್ನಿಸಿದ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಹಾಗೂ ಇನ್ನಿಬ್ಬರಿಗೆ ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿ ಲಭಿಸಿದಕ್ಕೆ ಉರಿದು ಬಿದ್ದಿದೆ. ಚೀನಾ ಎಂಟೂವರೆ ಕೋಟಿ ಜನರನ್ನು ಭಾರೀ ಬಡತನದಿಂದ ಮೇಲೆತ್ತಿದರೂ ನೊಬೆಲ್‌ ಸಿಕ್ಕಿಲ್ಲ. ಚೀನಾ ಈ ಸಾಧನೆಗೆ ನೊಬೆಲ್‌ ಸಿಗಬೇಕಿತ್ತು ಎಂದು ಅಲ್ಲಿನ ಜನ ಸಾಮಾಜಿಕ ಜಾಲ ತಾಣಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.

9. BB7; ಬಯಲಾಯ್ತು ಮದ್ವೆ ಗುಟ್ಟು, 'ಅಗ್ನಿಸಾಕ್ಷಿ' ಚಂದ್ರಿಕಾಳ ಸಿಂಗಲ್‌ ಲೈಫ್‌ಗೆ ಬ್ರೇಕ್?

Bharat Ratna To VD Savarkar To Anil Kuymble Birthday Top 10 Stories Of October 17
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಇಂಟರೆಸ್ಟಿಂಗ್ ವಿಚಾರಗಳು ರಿವೀಲ್ ಆಗ್ತಾ ಇರುತ್ತದೆ. ಅದರಲ್ಲೂ ಲವ್, ಗಾಸಿಪ್ ಗಳಿಗೇನೂ ಬರವಿಲ್ಲ. ಬಿಗ್‌ ಬಾಸ್‌ ಮನೆಯ ಕೇಂದ್ರ ಬಿಂದು ಶೈನ್‌ ಶೆಟ್ಟಿ ಹಾಗೂ ಪ್ರಿಯಾಂಕಾ ಮದುವೆ ಗುಟ್ಟು ರಟ್ಟಾಗಿದೆ.

10. ಬೆಂಗಳೂರು: ಮಾಜಿ ಕುಲಪತಿ ಹತ್ಯೆ, ಒಂದು ಕೋಟಿ...ಒಂದು ಕೊಲೆ

Bharat Ratna To VD Savarkar To Anil Kuymble Birthday Top 10 Stories Of October 17
ಅಲಯನ್ಸ್ ವಿವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣವನ್ನು ಆರ್‌.ಟಿ.ನಗರ ಪೊಲೀಸರು ಬೇಧಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Follow Us:
Download App:
  • android
  • ios