ಮೈಸೂರು 'ಕೈ' ತಪ್ಪಿದ ಮೇಯರ್ ಹುದ್ದೆ; ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಲಿದ 'ಭಾಗ್ಯ'

First Published 24, Jan 2018, 12:52 PM IST
Bhagyavathi Elected as Mysore Mayor
Highlights

ಮೈಸೂರು ಪಾಲಿಕೆ ಮೇಯರ್​ ಆಗಿ ಭಾಗ್ಯವತಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಜೆಡಿಎಸ್‌'ನ ಇಂದಿರಾ ಮಹೇಶ್ ಅವಿರೋಧ ಆಯ್ಕೆಯಾಗಿದ್ದಾರೆ. ಮೀಸಲಾತಿ ಲಾಭ ಪಡೆಯಲು ಹೊರಟ ಕಾಂಗ್ರೆಸ್‌'ಗೆ ಜೆಡಿಎಸ್- ಬಿಜೆಪಿಯಿಂದ ಪಾಠ ಕಲಿಸಿದೆ.  ಸಿಎಂ ತವರು ಜಿಲ್ಲೆಯಲ್ಲಿ ಕಾಂಗ್ರೆಸ್'​ಗೆ ಭಾರೀ ಮುಖಭಂಗವಾಗಿದೆ.

ಮೈಸೂರು (ಜ.24): ಅಧಿಕಾರಕ್ಕಾಗಿ ಮೀಸಲಾತಿಯನ್ನು ಬದಲಾಯಿಸಿದರೂ ಮೈಸೂರು ನಗರ ಪಾಲಿಕೆ ಮೇಯರ್ ಪಟ್ಟ 'ಕೈ' ತಪ್ಪಿದ್ದು, ಸಿಎಂ ತವರು ಜಿಲ್ಲೆಯಲ್ಲೇ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ನಗರ ಪಾಲಿಕೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಮುಂದುವರೆದಿದೆ.

ಮೈಸೂರು ಪಾಲಿಕೆ ಮೇಯರ್​ ಆಗಿ ಭಾಗ್ಯವತಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಜೆಡಿಎಸ್‌'ನ ಇಂದಿರಾ ಮಹೇಶ್ ಅವಿರೋಧ ಆಯ್ಕೆಯಾಗಿದ್ದಾರೆ. ಮೀಸಲಾತಿ ಲಾಭ ಪಡೆಯಲು ಹೊರಟ ಕಾಂಗ್ರೆಸ್‌'ಗೆ ಜೆಡಿಎಸ್- ಬಿಜೆಪಿಯಿಂದ ಪಾಠ ಕಲಿಸಿದೆ.  ಸಿಎಂ ತವರು ಜಿಲ್ಲೆಯಲ್ಲಿ ಕಾಂಗ್ರೆಸ್'​ಗೆ ಭಾರೀ ಮುಖಭಂಗವಾಗಿದೆ.

ಭಾಗ್ಯವತಿ ವಿರುದ್ಧವಾಗಿ ಒಂದೂ ಮತ ಬಿದ್ದಿಲ್ಲ. ತಟಸ್ಥವಾಗಿ ಕೂಡ ಒಂದೂ ಮತವಿಲ್ಲ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರಪಾಲಿಕೆಯಲ್ಲಿ ಹೈ ಡ್ರಾಮದ ನಡುವೆಯೂ ಜೆಡಿಎಸ್ ಅಧಿಕಾರ ಹಿಡಿದಿದೆ. ನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ನಗರಪಾಲಿಕೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರೆದಿದೆ.

ನಿನ್ನೆ ಭಾಗ್ಯವತಿ ನಾಪತ್ತೆಯಾಗಿದ್ದರು. ಇಂದು ಮುಂಜಾನೆ ಜೆಡಿಎಸ್ ಸದಸ್ಯರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಂಡಾಯ ಅಭ್ಯರ್ಥಿ ಭಾಗ್ಯವತಿ ನಾಮಪತ್ರ ಸಲ್ಲಿಸಿದ ನಂತರ ಕಮಲಾ ಎನ್ನುವವರು ನಾಮಪತ್ರ ಸಲ್ಲಿಸಿದರು.  ನಿನ್ನೆ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಮುಖಂಡರು ಚುನಾವಣಾ ಪೂರ್ವ ಸಭೆ ನಡೆಸಿದ್ದರು.  ಸಭೆಗೆ ಭಾಗ್ಯವತಿ  ಗೈರು ಹಾಜರಾಗಿದ್ದರು. ಭಾಗ್ಯವತಿ ಪರವಾಗಿ ಪತಿ ಸುಬ್ರಹ್ಮಣ್ಯ ಸಭೆಗೆ ಹಾಜರಾಗಿದ್ದರು. ಚುನಾವಣೆ ಮುಗಿಯುವವರೆಗೂ ನಿಮ್ಮೊಂದಿಗೆ ಇರುತ್ತೇವೆ. ಭಾಗ್ಯವತಿ ಆಸ್ಪತ್ರೆಗೆ ಹೋಗಿದ್ದಾರೆ ಎಂದು ಸಭೆಯಲ್ಲಿ ಸುಬ್ರಹ್ಮಣ್ಯ ಹೇಳಿದ್ದರು.

loader