ಮತ್ತೊಮ್ಮೆ ವಿವಾದದಲ್ಲಿ ಭಗವಾನ್

ಮೈಸೂರು(ಸೆ.26): ಪ್ರೊಫೆಸರ್ ಭಗವಾನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಗನ್ಮೋಹನ ಅರಮನೆಯಲ್ಲಿ ನಡೆದ ವಿಶಿಷ್ಠ ಕವಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು ವಾಲ್ಮೀಕಿ ರಾಮಾಯಣದಲ್ಲಿ ಎಲ್ಲಿಯೂ ರಾಮನನ್ನ ದೇವರು ಅಂತಾ ಕರೆದಿಲ್ಲಾ ಅಂತಾ ಹೇಳಿದ್ದಾರೆ.

ಅಲ್ಲದೆ ಬ್ರಾಹ್ಮಣರ ಮಾತು ಕೇಳಿ ಶಂಬುಕನ ತಲೆ ಕತ್ತರಿಸಿದ. ಬ್ರಾಹ್ಮಣರ ಮಾತು ಕೇಳಿ ತುಂಬು ಗರ್ಭಿಣಿ ಸೀತೆಯನ್ನ ಕಾಡಿಗೆ ಕಳುಹಿಸಿದ.ವಾಲ್ಮೀಕಿ ರಾಮಾಯಣದಲ್ಲಿ ರಾಮನ ನಿಜ ಸ್ವರೂಪ ತಿಳಿಯಲಿದೆ.ಹಾಗಾಗಿ ರಾಮ ಮಂದಿರ ಕಟ್ಟುವ ಮೊದಲು ಯೋಚಿಸಬೇಕು ಅಂತಾ ಹೇಳಿದ್ದಾರೆ. ಇಂತಹ ವ್ಯಕ್ತಿಯ ದೇವಾಲಯ ಕಟ್ಟಲು ಹೊರಟಿಲು ಹೊರಟಿದ್ದಾರೆ ಅಂತಾ ಅಭಿಪ್ರಾಯಿಸಿದ್ದಾರೆ.