ಪುರುಷೋತ್ತಮ್’ಗೆ ಒಂದು ನಂಬರ್’ನಿಂದ ಕರೆ ಬಂದಿದೆ. ಆದರಲ್ಲಿ ತಾನು ಸೌಮ್ಯ ಎಂದು ಪರಿಚಯಿಸಿಕೊಂಡ ಆ ಯುವತಿ, ನಿಮ್ಮ ನಂಬರಿಗೆ ಲಕ್ಕಿಡಿಪ್ ಆಗಿದೆ. ಕೇವಲ ರೂ.1850ಕ್ಕೆ ನಿಮಗೆ ಒಂದು 16 ಸಾವಿರದ ಸ್ಯಾಮ್ಸಂಗ್ ಜೆ7 ಮೊಬೈಲ್ ಗಿಫ್ಟ್ ಬಂದಿದೆ. ಅದನ್ನು ನೀವು ಪೋಸ್ಟ್ ಆಫೀಸ್​ನಲ್ಲಿ ಬಿಡಿಸಿಕೊಳ್ಳಿ ಅಂತ ಪುಂಗಿ ಊದಿದ್ದಾಳೆ.

ಹಾಸನ (ಜ.18): ಗಿಫ್ಟ್​ ಬಂದಿದೆ ಎಂದು ಹುಡ್ಗೀರು ಕರೆ ಮಾಡಿದ್ರೆ ಹುಷಾರಾಗಿರಿ..! ಅದು ಮೋಸ ಮಾಡಲು ಬಲೆಗೆ ಕೆಡವೋ ಕಾಲ್​ ಆಗಿರಬಹುದು. ಯಾಕಂದ್ರೆ ಇದೇ ರೀತಿ ಹುಡುಗಿಯ ಕರೆಯನ್ನು ನಂಬಿ ಹಣ ಕಟ್ಟಿ ಹಾಸನದಲ್ಲೊಬ್ಬ ಮೋಸಹೋಗಿದ್ದಾನೆ.

ದೇವೇಗೌಡನಗರದ ಪುರುಷೋತ್ತಮ್​ 1850 ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಪುರುಷೋತ್ತಮ್’ಗೆ ಒಂದು ನಂಬರ್’ನಿಂದ ಕರೆ ಬಂದಿದೆ. ಆದರಲ್ಲಿ ತಾನು ಸೌಮ್ಯ ಎಂದು ಪರಿಚಯಿಸಿಕೊಂಡ ಆ ಯುವತಿ, ನಿಮ್ಮ ನಂಬರಿಗೆ ಲಕ್ಕಿಡಿಪ್ ಆಗಿದೆ. ಕೇವಲ ರೂ.1850ಕ್ಕೆ ನಿಮಗೆ ಒಂದು 16 ಸಾವಿರದ ಸ್ಯಾಮ್ಸಂಗ್ ಜೆ7 ಮೊಬೈಲ್ ಗಿಫ್ಟ್ ಬಂದಿದೆ. ಅದನ್ನು ನೀವು ಪೋಸ್ಟ್ ಆಫೀಸ್​ನಲ್ಲಿ ಬಿಡಿಸಿಕೊಳ್ಳಿ ಅಂತ ಪುಂಗಿಊದಿದ್ದಾಳೆ.

ಇದನ್ನು ನಂಬಿದ ಪುರುಷೋತ್ತಮ್, ರೂ.1850 ಹಣ ಕಟ್ಟಿ ಪೋಸ್ಟ್ ಆಫೀಸನಲ್ಲಿ ಗಿಫ್ಟ್ ಬಾಕ್ಸ್ ಬಿಡಿಸಿಕೊಂಡ್ರೆ, ಅದರಲ್ಲಿ 100 ರೂಪಾಯಿ ಬೆಲೆ ಬಾಳುವ ಗಂಟೆ, ದೀಪ ಸೇರಿದಂತೆ ಕಳಪೆ ಮಟ್ಟದ ವಸ್ತುಗಳನ್ನ ಕಳಿಸಿ ಯಾಮಾರಿಸಿದ್ದಾರೆ.

ವಂಚಕರನ್ನು ಸೆರೆಹಿಡಿಯುವಂತೆ ಹಾಸನ ನಗರ ಠಾಣೆಗೆ ಪುರುಷೋತ್ತಮ್ ದೂರು ನೀಡಿದ್ದಾರೆ.