ಬೆಂಗಳೂರು : ಆಧುನಿಕ ಜೀವನದ ಜಂಜಾಟದಲ್ಲಿ ಮನಸ್ಸಿಗೆ ಶಾಂತಿಯಿಲ್ಲದೇ ಕೊರಗುವ ಬದಲು ಈ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಶಾಂತಿಯನ್ನು ಕಂಡುಕೊಳ್ಳಿ. ಇಲ್ಲಿಗೊಮ್ಮೆ ಭೇಟಿ ನೀಡಿದಲ್ಲಿ ನಿಮಗೆ ಆಂತರ್ಯದಲ್ಲೊಂದು ಶಾಂತಿ ದೊರೆಯುವುದು ಖಚಿತ.

ಗೋಲ್ಡನ್ ಟೆಂಪಲ್ 

ಸಿಖ್ ಪವಿತ್ರ ಕ್ಷೇತ್ರವಾದ ಗೋಲ್ಡನ್ ಟೆಂಪಲ್ ಗೆ ಒಮ್ಮೆ ಭೇಟಿ ನೀಡಿ ಬನ್ನಿ. ವಿಶ್ವದಾದ್ಯಂತ ಭಕ್ತರನ್ನು ತನ್ನತ್ತ ಸೆಳೆಯುವ ಗೋಲ್ಡನ್ ಟೆಂಪಲ್  ಸಹೋದರಸತ್ವ ಶಾಂತಿಯ ಸಂಕೇತವಾಗಿದೆ. 

ಕೋನಾರ್ಕ್ ಟೆಂಪಲ್ 
ಕೋನಾರ್ಕ್ ನಲ್ಲಿರುವ ಸೂರ್ಯ ದೇವಾಲಯವು ಅತ್ಯಂತ ಹೆಚ್ಚು ಭಕ್ತರನ್ನು ತನ್ನ ಸೆಳೆಯುತ್ತದೆ.

ತಿರುಪತಿ ದೇವಾಲಯ
ಅತೀ ಹೆಚ್ಚು ಸಂಖ್ಯೆಯ ಭಕ್ತರು ಭೇಟಿ ನೀಡುವ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಾಲಯ ಮನಶಾಂತಿ ದೊರೆಯುವಂತೆ ಮಾಡುವ ಧಾರ್ಮಿಕ ಕ್ಷೇತ್ರವಾಗಿದೆ. 

ರಿಶಿಕೇಶ
ಯೋಗದ  ಪ್ರಸಿದ್ಧ ಆಶ್ರಮವನ್ನು ಹೊಂದಿರುವ ಶಾಂತಿ ನೆಲೆಸಿದ ಧಾರ್ಮಿಕ ಕ್ಷೇತ್ರ ರಿಶಿಕೇಶವೂ ಕೂಡ ಮನಶಾಂತಿ ಪಡೆಯಲು

ವಾರಣಾಸಿ
ಗಂಗಾರತಿಗೆ ಪ್ರಸಿದ್ಧವಾಗಿರುವ ದಶಾಶ್ವಮೇದ ಘಾಟ್ ಇರುವ ವಾರಣಾಸಿಯೂ ಕೂಡ ಮನಶಾಂತಿ ದೊರೆಯುವಂತೆ ಮಾಡುತ್ತದೆ

ಅಜ್ಮೀರ್ ಶರಿಫ್ ದರ್ಗಾ
ದೇಶದ ಅತ್ಯಂತ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ಅಜ್ಮೀರ್ ಶರೀಫ್ ದರ್ಗಾ ಕೂಡ ಮನಶಾಂತಿಯನ್ನು ಒದಗಿಸುವಂತಹ ಪ್ರದೇಶವಾಗಿದೆ.