ಅಟ್ಲಾಂಟಿಕ್ : ಉತ್ತರ ಅಟ್ಲಾಂಟಿಕ್ ಸಮುದ್ರದ ತ್ರಿಕೋನಾಕಾರದ ಪ್ರದೇಶ ಬರ್ಮುಡಾ ಟ್ರಾಂಗಲ್‌ನಲ್ಲಿ ಹಾದುಹೋದ ನೂರಾರು ವಿಮಾನಗಳು, ಹಡಗು ಗಳು ಮತ್ತೆಂದೂ ಕಂಡಿಲ್ಲ. ಇಲ್ಲಿ ಹಾರಾಡಿದ ಹಲವು ವಿಮಾನಗಳು, ಸಾಗಿದ ಹಡುಗುಗಳು ಅವಶೇಷಗಳೂ ಸಿಗದಂತೆ ಕಣ್ಮರೆಯಾಗಿವೆ. ಅದಕ್ಕೆ ಕಾರಣ ಏನು ಎಂಬದೂ ಇಂದಿಗೂ ನಿಗೂಢವಾಗಿಯೇ ಉಳಿದಿದೆ. 

ಹಾಗಾಗಿಯೇ ಇದನ್ನು ಡೆವಿಲ್ಸ್ ಟ್ರಯಾಂಗಲ್ ಎಂದೂ ಕರೆಯುತ್ತಾರೆ. ಆದರೆ 90 ವರ್ಷಗಳ ಹಿಂದೆ ಬರ್ಮುಡಾ ಟ್ರಯಾಂಗಲ್ ಪ್ರದೇಶದಲ್ಲಿ  ಮುಳುಗಡೆಯಾಗಿದ್ದ ಎಸ್‌ಎಸ್ ಕೊಟೊಪಾಕ್ಸಿ ಹಡಗು ಇತ್ತೀಚೆಗೆ ಪತ್ತೆಯಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡು ತ್ತಿದೆ. ಆ ಸಂದೇಶದಲ್ಲಿ, ‘1925 ರ ಡಿಸೆಂಬರ್‌ನಲ್ಲಿ ಬರ್ಮುಡಾ ಟ್ರಯಾಂಗಲ್‌ನಲ್ಲಿ ಸಾಗುವ ವೇಳೆ ನಾಪತ್ತೆಯಾಗಿದ್ದ ಎಸ್‌ಎಸ್ ಕೊಟೊಪಾಕ್ಸಿ ಹಡಗು ಹವಾಯಿ ದ್ವೀಪದ ಬಳಿ ಪತ್ತೆಯಾಗಿದೆ. 

ಕ್ಯೂಬಾ ಅಧಿಕಾರಿಗಳು ಮೇ 16 ರಂದು ಈ ಹಡಗನ್ನು ಪತ್ತೆಮಾಡಿದ್ದಾರೆ. ಬರ್ಮುಡಾ ಟ್ರಯಾಂಗಲ್ ದುರಂತಗಳಿಗೆ ಕಾರಣ ಏನು ಎಂಬುದು ಬಹಳ ಮುಖ್ಯವಾದ ವಿಚಾರ. ಇಲ್ಲಿ ಘಟಿಸಿದ ಹಲವಾರು ದುರ್ಘಟನೆಗಳು ಹಲವು ದೇಶಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿವೆ. ಅಂತೂ ಈ ಮೂಲಕ ಎಲ್ಲಾ ನಿಗೂಢಗಳಿಗೆ ಉತ್ತರ ದೊರೆತಿದೆ’ ಎಂದು ಹೇಳಲಾಗಿದೆ. 

ಆದರೆ ನಿಜಕ್ಕೂ 90 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಹಡಗು ಹವಾಯಿ ದ್ವೀಪದ ಬಳಿ ಪತ್ತೆಯಾಗಿದೆಯೇ ಎಂಬುದನ್ನು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ. ಈ ಸುದ್ದಿಗೆ ಯಾವ ಆಧಾರವೂ ಇಲ್ಲ ಮತ್ತು ಕೊಟೊಪಾಕ್ಸಿ ಹಡಗು ಪತ್ತೆಯಾಗಿಯೂ ಇಲ್ಲ ಉತ್ತರ ಅಟ್ಲಾಂಟಿಕ್ ಸಮುದ್ರದ ತ್ರಿಕೋನಾಕಾರದ ಪ್ರದೇಶ ಬರ್ಮುಡಾ ಟ್ರಾಂಗಲ್‌ನಲ್ಲಿ ಹಾದುಹೋದ ನೂರಾರು ವಿಮಾನಗಳು, ಹಡಗುಗಳು ಮತ್ತೆಂದೂ ಕಂಡಿಲ್ಲ. 

ಇಲ್ಲಿ ಹಾರಾಡಿದ ಹಲವು ವಿಮಾನಗಳು, ಸಾಗಿದ ಹಡುಗುಗಳು ಅವಶೇಷಗಳೂ ಸಿಗದಂತೆ ಕಣ್ಮರೆಯಾಗಿವೆ. ಅದಕ್ಕೆ ಕಾರಣ ಏನು ಎಂಬದೂ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಹಾಗಾಗಿಯೇ ಇದನ್ನು ಡೆವಿಲ್ಸ್ ಟ್ರಯಾಂಗಲ್ ಎಂದೂ ಕರೆಯುತ್ತಾರೆ. ಆದರೆ90 ವರ್ಷಗಳ ಹಿಂದೆ ಬರ್ಮುಡಾ ಟ್ರಯಾಂಗಲ್ ಪ್ರದೇಶದಲ್ಲಿ ಮುಳುಗಡೆಯಾ ಗಿದ್ದ ಎಸ್‌ಎಸ್ ಕೊಟೊಪಾಕ್ಸಿ ಹಡಗು ಇತ್ತೀಚೆಗೆ ಪತ್ತೆಯಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡು ತ್ತಿದೆ. 

ಆ ಸಂದೇಶದಲ್ಲಿ, ‘1925 ರ ಡಿಸೆಂಬರ್‌ನಲ್ಲಿ ಬರ್ಮುಡಾ ಟ್ರಯಾಂಗಲ್‌ನಲ್ಲಿ ಸಾಗುವ ವೇಳೆ ನಾಪತ್ತೆಯಾಗಿದ್ದ ಎಸ್‌ಎಸ್ ಕೊಟೊಪಾಕ್ಸಿ ಹಡಗು ಹವಾಯಿ ದ್ವೀಪದ ಬಳಿ ಪತ್ತೆಯಾಗಿದೆ. ಕ್ಯೂಬಾ ಅಧಿಕಾರಿಗಳು ಮೇ 16 ರಂದು ಈ ಹಡಗನ್ನು ಪತ್ತೆಮಾಡಿದ್ದಾರೆ. ಬರ್ಮುಡಾ ಟ್ರಯಾಂಗಲ್ ದುರಂತಗಳಿಗೆ ಕಾರಣ ಏನು ಎಂಬುದು ಬಹಳ ಮುಖ್ಯವಾದ ವಿಚಾರ. ಇಲ್ಲಿ ಘಟಿಸಿದ ಹಲವಾರು ದುರ್ಘಟನೆಗಳು ಹಲವು ದೇಶಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿವೆ. ಅಂತೂ ಈ ಮೂಲಕ ಎಲ್ಲಾ ನಿಗೂಢಗಳಿಗೆ ಉತ್ತರ ದೊರೆತಿದೆ’ ಎಂದು ಹೇಳಲಾಗಿದೆ. ಆದರೆ ನಿಜಕ್ಕೂ 90 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಹಡಗು ಹವಾಯಿ ದ್ವೀಪದ ಬಳಿ ಪತ್ತೆಯಾಗಿದೆಯೇ ಎಂಬುದನ್ನು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ. ಈ ಸುದ್ದಿಗೆ ಯಾವ ಆಧಾರವೂ ಇಲ್ಲ ಮತ್ತು ಕೊಟೊಪಾಕ್ಸಿ ಹಡಗು ಪತ್ತೆಯಾಗಿಯೂ ಇಲ್ಲ.