ಕರ್ನಾಟಕ ಬಂದ್: ಬೆಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ

First Published 24, Jan 2018, 10:43 AM IST
Bengaluru University Exam Postponed
Highlights

ನಾಳೆ ಕರ್ನಾಟಕ ಬಂದ್ ಹಿನ್ನಲೆಯಲ್ಲಿ  ಬೆಂಗಳೂರು ವಿವಿ ಪರೀಕ್ಷೆಗಳನ್ನು  ಮುಂದೂಡಲಾಗಿದೆ. ನಾಳೆ ನಡೆಯಬೇಕಿದ್ದ ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ ಸೇರಿದಂತೆ ಪಿಜಿ ಕೋರ್ಸ್​ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಬೆಂಗಳೂರು (ಜ.24): ನಾಳೆ ಕರ್ನಾಟಕ ಬಂದ್ ಹಿನ್ನಲೆಯಲ್ಲಿ  ಬೆಂಗಳೂರು ವಿವಿ ಪರೀಕ್ಷೆಗಳನ್ನು  ಮುಂದೂಡಲಾಗಿದೆ. ನಾಳೆ ನಡೆಯಬೇಕಿದ್ದ ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ ಸೇರಿದಂತೆ ಪಿಜಿ ಕೋರ್ಸ್​ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಪ್ರಥಮ ವರ್ಷದ ಪದವಿ ಪರೀಕ್ಷೆಗಳು ಫೆ.8 ಕ್ಕೆ ಮುಂದೂಡಲಾಗಿದೆ.  3 ನೇ ವರ್ಷದ  ಬಿಎ, ಬಿಎಸ್ಸಿ ಪರೀಕ್ಷೆಯನ್ನು ಫೆ.5 ಕ್ಕೆ ಮುಂದೂಡಲಾಗಿದೆ.

3 ನೇ ವರ್ಷದ ಬಿಕಾಂ, ಬಿಬಿಎಂ ಪರೀಕ್ಷೆಗಳನ್ನು  ಜನವರಿ 28 ಕ್ಕೆ ನಿಗದಿಪಡಿಸಲಾಗಿದ್ದು,  2 ನೇ ವರ್ಷದ ಎಂಎ, ಎಂಎಸ್ಸಿ ಪರೀಕ್ಷೆಗಳನ್ನು ಫೆ.2 ಕ್ಕೆ ನಿಗದಿಪಡಿಸಲಾಗಿದೆ.

 

loader