ಬೆಂಗಳೂರು ವಾಹನ ಸವಾರರೇ ಎಚ್ಚರ..!

First Published 3, Mar 2018, 10:15 AM IST
Bengaluru Traffic Police Take Strict Action
Highlights

ಕಾನೂನು ಉಲ್ಲಂಘಿಸಿ ಏಕಮುಖ ರಸ್ತೆ ಯಲ್ಲಿ ವಾಹನ ಓಡಿಸಿದವರಿಗೆ ಶುಕ್ರವಾರ ಸಂಚಾರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿದ್ದು, ಒಂದೇ ದಿನದಲ್ಲಿ 2763 ಪ್ರಕರಣ ದಾಖಲಿ ಸಿದ್ದಾರೆ. ಬೆಳಗ್ಗೆಯಿಂದಲೇ ಏಕ ಮುಖ ಸಂಚಾರ ಮಾರ್ಗದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದ ಪೊಲೀಸರು, ನಿಯಮ ಮೀರಿ ವಾಹನ ಓಡಿಸಿದವರಿಗೆ ದಂಡ ಪ್ರಯೋಗ ಮಾಡಿದ್ದಾರೆ.

ಬೆಂಗಳೂರು: ಕಾನೂನು ಉಲ್ಲಂಘಿಸಿ ಏಕಮುಖ ರಸ್ತೆ ಯಲ್ಲಿ ವಾಹನ ಓಡಿಸಿದವರಿಗೆ ಶುಕ್ರವಾರ ಸಂಚಾರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿದ್ದು, ಒಂದೇ ದಿನದಲ್ಲಿ 2763 ಪ್ರಕರಣ ದಾಖಲಿ ಸಿದ್ದಾರೆ. ಬೆಳಗ್ಗೆಯಿಂದಲೇ ಏಕ ಮುಖ ಸಂಚಾರ ಮಾರ್ಗದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದ ಪೊಲೀಸರು, ನಿಯಮ ಮೀರಿ ವಾಹನ ಓಡಿಸಿದವರಿಗೆ ದಂಡ ಪ್ರಯೋಗ ಮಾಡಿದ್ದಾರೆ.

ಸಂಜೆ 5 ಗಂಟೆಗೆ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಶನಿವಾರ ಸಹ ಮುಂದುವರೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಪೂರ್ವ ವಲಯದ 1447 , ಪಶ್ಚಿಮ ವಿಭಾಗ 517, ಉತ್ತರ ವಿಭಾಗದ ವ್ಯಾಪ್ತಿ 799 ಪ್ರಕರಣ ದಾಖಲಿಸಿ ದ್ದಾರೆ.

ಏಕಮುಖ ಮಾರ್ಗದಲ್ಲಿ ಸಂಚಾರ ಶಿಸ್ತು ಜಾರಿಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

loader