ಸಿಬ್ಬಂದಿಗಳು ನೆರವಿಗೆ ಬಾರದೆ ಇರುವುದು ಪ್ರವಾಸಿಗರಲ್ಲಿ ಅತಂಕ ಉಂಟುಮಾಡಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬೆಂಗಳೂರಿನಿಂದ ಗೋವಾ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಬೋಟ್ ಕೆಟ್ಟುನಿಂತ ಕಾರಣ ಸಮುದ್ರದ ಮದ್ಯೆ ಸಿಲುಕಿ ಆತಂಕದಲ್ಲಿದ್ದಾರೆ.
47 ಕನ್ನಡಿಗರು ಬೆಂಗಳೂರನ ಪೀಣ್ಯ ಪ್ರದೇಶದಿಂದ ಗೋವಾಕ್ಕೆ ತೆರಳಿದ್ದು, ಪಣಜಿಯ ರಾಯಬಾಗ್'ನ ಸಮುದ್ರಕ್ಕೆ ಬೋಟ್ ನಲ್ಲಿ ತೆರಳಿದ್ದಾರೆ. ಈ ವೇಳೆ ಬೋಟ್ ಸಮುದ್ರದ ಮದ್ಯೆ ಕೆಟ್ಟು ನಿಂತು ಎರಡು ಗಂಟೆಗಳಾದರು ಅಲ್ಲಿನ ಸಿಬ್ಬಂದಿಗಳು ನೆರವಿಗೆ ಬಾರದೆ ಇರುವುದು ಪ್ರವಾಸಿಗರಲ್ಲಿ ಅತಂಕ ಉಂಟುಮಾಡಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಜೆಯಾಗುತ್ತಿರುವುದರಿಂದ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗುತ್ತಿದ್ದು, ಅಲೆಗಳ ವೇಗಕ್ಕೆ ಬೋಟ್ ಅತ್ತಿತ್ತ ಚಲಿಸುತ್ತಿರುವುದರಿಂದ ಮತ್ತಷ್ಟು ಅತಂಕ ಉಂಟು ಮಾಡಿದ್ದು ತಮ್ಮನ್ನು ಪಾರು ಮಾಡಿ ಎಂದು ಪ್ರವಾಸಿಗರು ಬೇಡಿಕೊಳ್ಳುತ್ತಿದ್ದಾರೆ.
