Asianet Suvarna News Asianet Suvarna News

ಮೆ.12 ರಿಂದ ಬೆಂಗಳೂರಿನಲ್ಲಿ ದೇಶದ ಅತೀ ದೊಡ್ಡ ಅನಿಮೇಶನ್ ಕಾನ್ಫರೆನ್ಸ್

Bengaluru to host India largest conference for Animation Games  VFX industry in May
  • Facebook
  • Twitter
  • Whatsapp

ಬೆಂಗಳೂರು (ಏ. 21): ಅನಿಮೇಶನ್’ನಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು, ಕಲಾವಿದರು ಹಾಗೂ ವೃತ್ತಿಪರರಿಗೆ ತಮ್ಮ ಕೌಶಲ್ಯವನ್ನು ಹೆಚ್ಚಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಮುಂಬರುವ ಮೇ.12-14ವೆರಗೆ ಅನಿಮೆಶನ್, ಗೇಮಿಂಗ್ ಹಾಗೂ ವಿಶುವಲ್ ಎಫೆಕ್ಟ್ಸ್ ಸಮ್ಮೆಳನ  ಹಮ್ಮಿಕೊಂಡಿದೆ.

ಸಮ್ಮೇಳನದಲ್ಲಿ ತಜ್ಞರಿಂದ ತರಗತಿ ಚರ್ಚೆ-ಉಪನ್ಯಾಸ, ಪ್ರಾತ್ಯಕ್ಷಿತೆ, ಕಾರ್ಯಾಗಾರ, ಲೈವ್ ಮ್ಯಾರಥಾನ್, ಕಲಾ ಸ್ಪರ್ಧೆ ಹಾಗೂ ತಾಂತ್ರಿಕ ಹ್ಯಾಕಥಾನ್’ಗಳು ಕೂಡಾ ನಡೆಯಲಿವೆ.

ವರ್ಚುವಲ್ ರಿಯಾಲಿಟಿ, ಕ್ಯಾರಿಯರ್ ಹಾಗೂ ಉದ್ಯೋಗ ಮೇಳಗಳು ಕೂಡಾ ಈ ಬೆಂಗಳೂರು GAFX  ಕಾನ್ಫರೆನ್ಸ್’ನ ಭಾಗವಾಗಿರುವುದು.

ಅನಿಮೇಶನ್, ಗೇಮಿಂಗ್’ಗೆ ಸಂಬಂಧಪಟ್ಟಂತೆ ಇದು ಭಾರತದಲ್ಲೇ ಅತೀ ದೊಡ್ಡ ಸಮ್ಮೇಳನವಾಗಿದ್ದು, ವಿದ್ಯಾರ್ಥಿಗಳು, ತಂತ್ರಜ್ಞರು ಹಾಗೂ ಕಲಾವಿದರಿಗೆ ಜಾಗತಿಕೆ ವೇದಿಕೆ ಒದಗಿಸಿದಂತಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Follow Us:
Download App:
  • android
  • ios