ಮೋಜಿನ ಜೀವನಕ್ಕಾಗಿ ಕಳ್ಳನಾದ ಮೂಲತಃ ಆಂಧ್ರದ ಕಾಕಿನಾಡಿ ನಿವಾಸಿ
ಬೆಂಗಳೂರು[ಜು.12]: ಟೆಕ್ಕಿಯೊಬ್ಬ ಬಾಡಿಗೆ ಕಾರನ್ನು ಕದ್ದು ಪರಾರಿಯಾದ ಘಟನೆ ಅಶೋಕನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಆಂಧ್ರ ನಿವಾಸಿಯಾದ ಮಹೇಶ್ ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಸಾಯಿಕುಮಾರ್ ಎಂಬಾತನ ಹೆಸರಿನಲ್ಲಿ ನಕಲಿ ದಾಖಲೆ ನೀಡಿ ಬೆಂಗಳೂರಿನಲ್ಲಿ ಜೂಮ್ ಕಾರ್ ಬುಕ್ ಮಾಡಿದ್ದ. ಜೂಮ್ ಕಾರ್ ಸಿಗ್ತಿದ್ದಂತೆ ಕಾರ್ ತೆಗೆದುಕೊಂಡು ಕಾಕಿನಾಡ್ ಗೆ ಪರಾರಿಯಾಗಿದ್ದಾನೆ.
ದಾರಿ ಮಧ್ಯೆ ಕಾರಿನ ನಂಬರ್ ಪ್ಲೇಟನ್ನ ಬದಲಾಯಿಸಿ ಜಿಪಿಎಸ್ ಕಿತ್ತು ಹಾಕಿದ್ದಾನೆ. ಐಷರಾಮಿ ಜೀವನಕ್ಕಾಗಿ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[ಸಾಂದರ್ಭಿಕ ಚಿತ್ರ]
