ದಾಸನಪುರದ ನಿವಾಸಿ ರಾಕೇಶ್‌(23) ಮೃತ ದುರ್ದೈವಿ. ಘಟನೆ ಸಂಬಂಧ ಕ್ಯಾಂಟರ್‌ ಚಾಲಕ ಆಸೀಫ್‌ನನ್ನು (25) ಪೀಣ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಬೆಂಗಳೂರು[ನ.13]: ಬೈಕ್‌ಗೆ ಕ್ಯಾಂಟರ್‌ ವಾಹನ ಡಿಕ್ಕಿಯಾಗಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಪೀಣ್ಯದಲ್ಲಿ ಭಾನುವಾರ ರಾತ್ರಿ ನಡೆದಿದೆ.

ದಾಸನಪುರದ ನಿವಾಸಿ ರಾಕೇಶ್‌(23) ಮೃತ ದುರ್ದೈವಿ. ಘಟನೆ ಸಂಬಂಧ ಕ್ಯಾಂಟರ್‌ ಚಾಲಕ ಆಸೀಫ್‌ನನ್ನು (25) ಪೀಣ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ರಾಕೇಶ್‌, ಉಲ್ಲಾಳ ಉಪನಗರದಲ್ಲಿರುವ ವಿದ್ಯಾನಿಕೇತನ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾಕೇಶ್‌ ಕೆಲಸದ ನಿಮಿತ್ತ ಬೈಕ್‌ನಲ್ಲಿ ದಾಸನಪುರದಿಂದ ನಗರಕ್ಕೆ ಬಂದಿದ್ದರು. ರಾತ್ರಿ 9.30ರಲ್ಲಿ ಮನೆಗೆ ವಾಪಸ್‌ ಹಿಂದಿರುಗುತ್ತಿದ್ದರು. ಈ ವೇಳೆ ಪೀಣ್ಯ ಮೇಲ್ಸೇತುವೆ ಬಳಿ ಹಿಂದಿನಿಂದ ಬಂದ ಕ್ಯಾಂಟರ್‌ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.