ಬೆಂಗಳೂರು[ಜೂ. 25] ಬೆಂಗಳೂರು, ದಾವಣಗೆರೆ ಸೇರಿದಂತೆ ಕರ್ನಾಟಕದ ಸಾವಿರಾರು ಜನರಿಗೆ ವಂಚಿಸಿ ಪರಾರಿಯಾಗಿರುವ ಐಎಂಎ ವಂಚನೆ ಪ್ರಕರಣದ ಆರೋಪಿಗಳ ಕಾವಲು ಕೆಲಸದಲ್ಲಿಯೂ ಕರ್ತವ್ಯ ಲೋಪ ಆಗಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಗಳ ಕಾವಲು ಕೆಲಸದಲ್ಲಿ ಕರ್ತವ್ಯ ಲೋಪ ಆರೋಪದಡಿ ಪೊಲೀಸ್ ಪೇದೆಯೊಬ್ಬರನ್ನು ಅಮಾನತು ಮಾಡಲಾಗಿದೆ.  ಸದ್ದಾಂಹುಸೇನ್  ಎಂಬ ಪೇದೆಯನ್ನು ಅಮಾನತು ಮಾಡಲಾಗಿದೆ.

IMAನಲ್ಲಿ ಚಿನ್ನ ಇಟ್ಟ ಗ್ರಾಹಕರಿಗೆ ಕೊಂಚ ರಿಲೀಫ್!

ಆಗಿದ್ದೇನು? ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಜೂನ್  21 ರಂದು ನೈಟ್ ರೌಂಡ್ಸ್ ನಲ್ಲಿದ್ದರು.  ಈ ವೇಳೆ ಐಎಂಎ ಆರೋಪಿಗಳಿರುವ ಹಲಸೂರು ಠಾಣೆಗೆ ವಿಸಿಟ್ ಮಾಡಿದ್ದರು.

ಆದರೆ ಆರೋಪಿಗಳ ಕಾವಲಿಗೆ ನಿಯೋಜನೆಯಾಗಿದ್ದ ಪಿಸಿ ಸದ್ದಾಂಹುಸೇನ್ ನಿದ್ರೆಗೆ ಜಾರಿದ್ದನ್ನು ಕಂಡ ಕಮಿಷನರ್ ಮಾಹಿತಿ ಕಲೆ ಹಾಕಿದ್ದರು. ಕರ್ತವ್ಯದಲ್ಲಿ ಆಶಿಸ್ತು, ಬೇಜವಾಬ್ದಾರಿ ತೀವ್ರ ನಿರ್ಲಕ್ಷ್ಯ ಆರೋಪದಡಿ ಇದೀಗ ಪೇದೆಯನ್ನು ಅಮಾನತು ಮಾಡಲಾಗಿದೆ.

ಐಎಂಎ ಆರೋಪಿಗಳಾದ ನಿಜಾಮುದ್ದೀನ್, ವಸೀಂ, ನಾಸಿರ್, ಅಸ್ಗರ್ ಪಾಷ. ನದೀಮ್ , ಹರ್ಷದ್ ಖಾನ್, ದಾದಪೀರ್ ಗೆ ಕಾವಲಿಗಿದ್ದ ಪೇದೆ ನಿದ್ರೆಗೆ ಜಾರಿದ್ದ ಕಾರಣ ಅಮಾನತು ಶಿಕ್ಷೆಗೆ ಗುರಿಯಾಗಬೇಕಾಗಿದೆ.