ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡರು ಅಭೂತಪೂರ್ವ ಗೆಲುವು | ಅಭಿನಂದಿಸಲು ಬೊಕ್ಕೆ ತರುವವರಿಗೆ ಮನವಿ | ಬೊಕ್ಕೆ ಬದಲು ಗಿಡ ತನ್ನಿ ಎಂದು ಮನವಿ 

ಬೆಂಗಳೂರು (ಮೇ. 28): ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡರು ಕಾಂಗ್ರೆಸ್ ನ ಕೃಷ್ಣ ಭೈರೇಗೌಡರನ್ನು 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಮಣಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಅವರ ಗೆಲುವನ್ನು ಅಭಿನಂದಿಸಲು ಬರುವವರಿಗೆ ಸದಾನಂದ ಗೌಡರು ಒಂದು ಮನವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಮಾನ್ಯವಾಗಿ ಅಭಿನಂದಿಸಲು ಬರುವವರು ಹೂಗುಚ್ಛಗಳನ್ನು ಕೊಟ್ಟು ವಿಶ್ ಮಾಡೋದು ಸಹಜ. ಆ ಹೂಗುಚ್ಛ ಆಮೇಲೆ ಉಪಯೋಗಕ್ಕೆ ಬರುವುದುಲ್ಲ. ಆಮೇಲೆ ಹಾಗೆಯೇ ಕಸದಬಟ್ಟಿ ಸೇರುತ್ತದೆ. ಈ ನಿಟ್ಟಿನಲ್ಲಿ ಸದಾನಂದ ಗೌಡರು ಹೂಗುಚ್ಛ ತರುವವರಿಗೆ ಮನವಿ ಮಾಡಿದ್ದಾರೆ. 

Scroll to load tweet…

ನನ್ನನ್ನು ಅಭಿನಂದಿಸಲು ಬರುವ ನನ್ನ ಮತದಾರ ಬಂಧುಗಳಲ್ಲಿ ಕೋರಿಕೆ .ನೀವು ಬರುವಾಗ ದಯವಿಟ್ಟು ಹಾರ ,ಬೊಕ್ಕೆ ತರಬೇಡಿ .ಬಳಿಕ ಅದು ಅನುಪಯುಕ್ತ .ನೀವು ಮಾತ್ರಬಂದು ಹೃತ್ಪೂರ್ವಕ ವಾಗಿ ಅಭಿನಂದಿಸಿದರೆ ಸಾಕು ಅದೇ ನನಗೆ ಆಶೀರ್ವಾದ . ನಿಮಗೇನಾದರೂ ಕೊಡಲೇ ಬೇಕೆನಿಸಿದರೆ , ಗಿಡ ತನ್ನಿ . ಉತ್ತಮ ಪುಸ್ತಕ ತನ್ನಿ . ಬೇರೆಯವರೊಂದಿಗೆ ಹಂಚಿ ಕೊಳ್ಳಬಹುದು ಎಂದಿದ್ದಾರೆ. 

ಸದಾನಂದ ಗೌಡರ ಈ ಮನವಿಯನ್ನು ತೇಜಸ್ವಿನಿ ಅನಂತ್ ಕುಮಾರ್ ಸ್ವಾಗತಿಸಿದ್ದು, ಗಿಡಗಳನ್ನು ನಮಗೆ ಕೊಡಿ. ನಾವು ಭಾನುವಾರ ನೆಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

Scroll to load tweet…