ಐಎಸ್ಐಎಸ್ ನೊಂದಿಗೆ ನಂಟು ಹೊಂದಿದ ಆರೋಪದಡಿಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ ಹಾಗೂ ಇಲ್ಲಿನ ಸ್ಥಳೀಯ ಪೋಲಿಸರು ಬಂಧಿಸಿದ್ದಾರೆ.
ನವದೆಹಲಿ (ಡಿ.17): ಐಎಸ್ಐಎಸ್ ನೊಂದಿಗೆ ನಂಟು ಹೊಂದಿದ ಆರೋಪದಡಿಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ ಹಾಗೂ ಇಲ್ಲಿನ ಸ್ಥಳೀಯ ಪೋಲಿಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಅಬೀದ್ ಖಾನ್ ಎನ್ನುವವರನ್ನು ಬಂಧಿಸಲಾಗಿದೆ. ಇವನು ಕಳೆದ ನಾಲ್ಕೈದು ತಿಂಗಳಿಂದ ನಕಲಿ ಗುರುತು ಹೇಳಿಕೊಂಡು ಚರ್ಚ್ ನಲ್ಲಿ ತಂಗಿದ್ದ ಎನ್ನಲಾಗಿದೆ.
ಅಬೀದ್ ಖಾನ್ ರನ್ನು ಗುಪ್ತಚರ ದಳ ತನಿಖೆ ನಡೆಸುತ್ತಿದೆ. ವಿಚಾರಣೆ ವೇಳೆ ಕೆಲವು ತನ್ನ ಸಹಚರರ ಹೆಸರನ್ನು ಹೇಳಿದ್ದು ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪೋಲಿಸ್ ಮಹಾ ನಿರ್ದೇಶಕ ಸಂಜಯ್ ಕುಮಾರ್ ಹೇಳಿದ್ದಾರೆ.
ಐಎಸ್ ಐಎಸ್ ಸಿದ್ಧಾಂತದಿಂದ ಪ್ರಭಾವಿತರಾಗಿರುವುದಾಗಿ ಖಾನ್ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ಮಾಹಿತಿ ನೀಡಲು ರಾಷ್ಟ್ರೀಯ ತನಿಖಾ ದಳ ನಿರಾಕರಿಸಿದ್ದು ವಿಚಾರಣೆ ನಡೆಯುತ್ತಿದೆ ಎಂದಿದ್ದಾರೆ.
