ಬೆಂಗಳೂರಿನ ನೇಹಾ ದಕ್ಷಿಣ ಕೊರಿಯಾಗೆ ಯೋಗ ಟೀಚರ್

news | Tuesday, January 16th, 2018
Suvarna Web Desk
Highlights

ಬೆಂಗಳೂರು ಮೂಲದ ನೇಹಾ ಗೋಯಲ್, ದಕ್ಷಿಣ ಕೊರಿಯಾ ಯೋಗ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ವಿಶ್ವದೆಲ್ಲೆಡೆ ಯೋಗ ಉತ್ತೇಜಿಸುವ ಸಲುವಾಗಿ ಮೊದಲಿಗರಾಗಿ ಆಯ್ಕೆಯಾದ ಕೆಲವೇ ಕೆಲವರಲ್ಲಿ ನೇಹಾ ಅವರು ಒಬ್ಬರು.

ನವದೆಹಲಿ: ಬೆಂಗಳೂರು ಮೂಲದ ನೇಹಾ ಗೋಯಲ್, ದಕ್ಷಿಣ ಕೊರಿಯಾ ಯೋಗ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ವಿಶ್ವದೆಲ್ಲೆಡೆ ಯೋಗ ಉತ್ತೇಜಿಸುವ ಸಲುವಾಗಿ ಮೊದಲಿಗರಾಗಿ ಆಯ್ಕೆಯಾದ ಕೆಲವೇ ಕೆಲವರಲ್ಲಿ ನೇಹಾ ಅವರು ಒಬ್ಬರು.

ಎಂಬಿಎ ಪದವೀಧರರಾದ ಗೋಯಲ್ ಕೈತುಂಬ ಸಂಬಳದ ಉದ್ಯೋಗ ಬಿಟ್ಟು ಯೋಗದಲ್ಲಿ ತೊಡಗಿದ್ದರು. ತಮ್ಮನ್ನು ತಾವು ದೈಹಿಕವಾಗಿ ದೃಢವಾಗಿ ಇರಿಕೊಳ್ಳುವ ಉದ್ದೇಶದಿಂದ 5 ವರ್ಷಗಳ ಹಿಂದೆ ನೇಹಾ ಯೋಗಾಭ್ಯಾಸ ಆರಂಭಿಸಿದ್ದರು. ಬಳಿಕ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ಯೋಗಾಭ್ಯಾಸ ಕೈಗೊಂಡಿದ್ದರು.

2015ರಲ್ಲಿ ನೇಹಾ ಯೋಗ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದರು. ನೇಹಾ ದಕ್ಷಿಣ ಕೊರಿಯಾದಲ್ಲಿ ಭಾರತೀಯ ಯೋಗ ಪದ್ಧತಿಯ ಕುರಿತು ಪ್ರಚಾರ ಕೈಗೊಳ್ಳಲಿದ್ದಾರೆ. ಜೊತೆಗೆ ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

Comments 0
Add Comment