ಮುಂಬೈ ಸಿರಿವಂತರ ಆಸ್ತಿ ರು. 54 ಲಕ್ಷ ಕೋಟಿ; ದಿಲ್ಲಿ ಶ್ರೀಮಂತರ ಬಳಿ ರು. 30 ಲಕ್ಷ ಕೋಟಿ ಹಣ; ಬೆಂಗಳೂರು ಕುಬೇರರ ಆಸ್ತಿ 21 ಲಕ್ಷ ಕೋಟಿ
ನವದೆಹಲಿ: ಅತಿ ಹೆಚ್ಚು ಶ್ರೀಮಂತರು ವಾಸಿಸುವ ನಗರಗಳ ಪಟ್ಟಿಯಲ್ಲಿ ಭಾರತದ ಐಟಿ ರಾಜಧಾನಿ ಎಂದೇ ಕರೆಸಿಕೊಳ್ಳುವ ಬೆಂಗಳೂರು ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಮುಂಬೈ ನಂ.1 ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ಸದ್ಯ 7700 ಮಂದಿ ಮಿಲಿಯನೇರ್‌ಗಳು (10 ಲಕ್ಷ ಅಮೆರಿಕನ್ ಡಾಲರ್ ಅಥವಾ 6.7 ಕೋಟಿ ರು.ಗಿಂತ ಹೆಚ್ಚಿನ ಸಂಪತ್ತು ಹೊಂದಿದವರು) ಹಾಗೂ 8 ಬಿಲಿಯನೇರ್ (100 ಶತಕೋಟಿ ಡಾಲರ್ ಅಥವಾ 6700 ಕೋಟಿ ರು. ಸಂಪತ್ತು ಹೊಂದಿದವರು)ಗಳು ಇದ್ದಾರೆ. ಒಟ್ಟಾರೆ ಬೆಂಗಳೂರಿನ ಶ್ರೀಮಂತರು 21 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದಾರೆ ಎಂದು ‘ನ್ಯೂ ವಲ್ಡ್‌ರ್ ವೆಲ್ತ್' ವರದಿ ತಿಳಿಸಿದೆ.
ಬರೋಬ್ಬರಿ 46 ಸಾವಿರ ಮಿಲಿಯನೇರ್ ಹಾಗೂ 28 ಬಿಲಿಯನೇರ್'ಗಳೀಗೆ ಆಶ್ರಯ ತಾಣವಾಗುವ ಮೂಲಕ ವಾಣಿಜ್ಯ ರಾಜಧಾನಿ ಮುಂಬೈ ದೇಶದ ನಂ.1 ಕುಬೇರರ ನಗರವಾಗಿ ಹೊರಹೊಮ್ಮಿದೆ.
ಮುಂಬೈನಲ್ಲಿರುವ ಸಿರಿವಂತರ ಒಟ್ಟಾರೆ ಆಸ್ತಿ 54 ಲಕ್ಷ ಕೋಟಿ ರೂ.ನಷ್ಟಿದೆ. ದೇಶದ ರಾಜಧಾನಿ ದೆಹಲಿ ಎರಡನೇ ಸ್ಥಾನದಲ್ಲಿದ್ದು, ಅಲ್ಲಿ 23 ಸಾವಿರ ಮಿಲಿಯನೇರ್ ಹಾಗೂ 18 ಬಿಲಿಯನೇರ್'ಗಳು ವಾಸ ಮಾಡುತ್ತಿದ್ದಾರೆ. ಅಲ್ಲಿನ ಶ್ರೀಮಂತರ ಬಳಿ 30 ಲಕ್ಷ ಕೋಟಿ ರೂ. ಸಂಪತ್ತು ಇದೆ ಎಂದು ವರದಿ ತಿಳಿಸಿದೆ.
2016ರ ಡಿಸೆಂಬರ್'ನ ಲೆಕ್ಕದ ಪ್ರಕಾರ, ಒಟ್ಟಾರೆ ದೇಶದಲ್ಲಿ 2.64 ಲಕ್ಷ ಮಿಲಿಯನೇರ್'ಗಳು ಹಾಗೂ 95 ಬಿಲಿಯನೇರ್'ಗಳು ಇದ್ದಾರೆ. 409 ಲಕ್ಷ ಕೋಟಿ ರೂ ಸಂಪತ್ತು ಹೊಂದಿದ್ದಾರೆ ಎಂದು ಹೇಳಿದೆ.
(epaper.kannadaprabha.in)
