ಬೆಂಗಳೂರು ಅಗ್ಗದ ನಗರ ಹೌದಾದರೂ, ಹೆಚ್ಚು ಸಂಚಾರಿ ದಟ್ಟಣೆ ನಗರವೆಂದು ಹೇಳಲಾಗಿದೆ. ಇಲ್ಲಿ ಮನೆಯಿಂದ ಕೆಲಸದ ಸ್ಥಳಕ್ಕೆ ತೆರಳಲು ನ್ಯೂಯಾರ್ಕ್, ಕೂಪನ್‌'ಹೇಗನ್‌'ಗಿಂತ ಹೆಚ್ಚು ಸಮಯಾವಕಾಶ ಅಗತ್ಯವಿದೆ. ಇತರೆ ನಗರಗಳಲ್ಲಿ ಸಾಮಾನ್ಯವಾಗಿ ಮನೆಯಿಂದ ಕೆಲಸದ ಸ್ಥಳಕ್ಕೆ ತೆರಳಲು 32 ನಿಮಿಷಗಳು ಬೇಕಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಕನಿಷ್ಠ 47 ನಿಮಿಷ ಬೇಕಾಗುತ್ತದೆ.

* ಬೆಂಗಳೂರಲ್ಲಿ ಸರಾಸರಿ ಮನೆ ಬಾಡಿಗೆ 15,250 ರು.
* ಸ್ಯಾನ್‌'ಫ್ರಾನ್ಸಿಸ್ಕೋದಲ್ಲಿ ಮನೆ ಬಾಡಿಗೆ 50,000 ರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು: ವಿಶ್ವದ 22 ಐಟಿ ನಗರಗಳ ಪಟ್ಟಿಯಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು ಅತಿ ಅಗ್ಗದ ನಗರವೆಂಬ ಖ್ಯಾತಿಗೆ ಭಾಜನವಾಗಿದೆ. ಉದ್ಯಾನಗರಿಯಲ್ಲಿ ಐಟಿ ಸಂಸ್ಥೆಗಳು ಮತ್ತು ರಿಯಲ್‌ ಎಸ್ಟೇಟ್‌ಗಳ ತ್ವರಿತ ಅಭಿವೃದ್ಧಿಯ ಹೊರತಾಗಿಯೂ ರು.15,250ಕ್ಕೆ ಬಾಡಿಗೆ ಮನೆಗಳು ಲಭ್ಯವಾಗುತ್ತವೆ. ಆದರೆ ಅಮೆರಿಕದ ಸ್ಯಾನ್‌'ಫ್ರಾನ್ಸಿಸ್ಕೊದಲ್ಲಿ ಬಾಡಿಗೆ ಮನೆಗೆ ರು.50 ಸಾವಿರ ತೆರಬೇಕಾಗುತ್ತದೆ. 

ಬರ್ಲಿನ್‌, ಬ್ಯೂನಸ್‌ ಐರಿಸ್‌, ಕೇಪ್‌ ಟೌನ್‌ ಮತ್ತು ಸ್ಯಾಂಟಿಯಾಗೊ ನಗರಗಳಿಗಿಂತ ಬೆಂಗಳೂರು ಅತಿ ಅಗ್ಗದ ನಗರವಾಗಿದೆ ಎಂದು ‘ಸ್ಯಾವಿಲ್ಸ್‌ ಟೆಕ್‌ ಸಿಟೀಸ್‌ ಇಂಡೆಕ್ಸ್‌' ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐದು ರೀತಿಯಾಗಿ ಮೌಲ್ಯ ಮಾಪನ ಮಾಡುವ ಮೂಲಕ ಐಟಿ ಸಿಟಿಗಳಿಗೆ ರಾರ‍ಯಂಕ್‌ ನೀಡಲಾಗಿದೆ.

ಬೆಂಗಳೂರು ಅಗ್ಗದ ನಗರ ಹೌದಾದರೂ, ಹೆಚ್ಚು ಸಂಚಾರಿ ದಟ್ಟಣೆ ನಗರವೆಂದು ಹೇಳಲಾಗಿದೆ. ಇಲ್ಲಿ ಮನೆಯಿಂದ ಕೆಲಸದ ಸ್ಥಳಕ್ಕೆ ತೆರಳಲು ನ್ಯೂಯಾರ್ಕ್, ಕೂಪನ್‌'ಹೇಗನ್‌'ಗಿಂತ ಹೆಚ್ಚು ಸಮಯಾವಕಾಶ ಅಗತ್ಯವಿದೆ. ಇತರೆ ನಗರಗಳಲ್ಲಿ ಸಾಮಾನ್ಯವಾಗಿ ಮನೆಯಿಂದ ಕೆಲಸದ ಸ್ಥಳಕ್ಕೆ ತೆರಳಲು 32 ನಿಮಿಷಗಳು ಬೇಕಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಕನಿಷ್ಠ 47 ನಿಮಿಷ ಬೇಕಾಗುತ್ತದೆ.

epaper.kannadaprabha.in