ಕೋರಮಂಗಲದಲ್ಲಿರುವ ಗೋಲ್ಡನ್ ಪ್ರಾಪರ್ಟಿಸ್ ಕಂಪನಿ ಅನೇಕರಿಂದ ಕೊಟ್ಯಂತರ ರು. ಹಣವನ್ನು ಪಡೆದುಕೊಂಡು ಮನೆಯನ್ನು ನೀಡುವುದಾಗಿ ಹೇಳಿತ್ತು. ಒಂದು ವರ್ಷದ ಒಳಗಾಗಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿತ್ತು. ಆದರೆ ಹಣ ಪಡೆದು ನಾಲ್ಕು ವರ್ಷವಾದರೂ ಕೂಡ ಯಾರಿಗೂ ಮನೆಗಳನ್ನು ನೀಡಿಲ್ಲ.
ಬೆಂಗಳೂರು(ನ.30): ಬೆಂಗಳೂರಿನ ಗೋಲ್ಡನ್ ಪ್ರಾಪರ್ಟಿಸ್ ಕಂಪನಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಕೋರಮಂಗಲದಲ್ಲಿರುವ ಈ ಕಂಪನಿಯು ಅನೇಕರಿಂದ ಕೊಟ್ಯಂತರ ರು. ಹಣವನ್ನು ಪಡೆದುಕೊಂಡು ಮನೆಯನ್ನು ನೀಡುವುದಾಗಿ ಹೇಳಿತ್ತು. ಒಂದು ವರ್ಷದ ಒಳಗಾಗಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿತ್ತು. ಆದರೆ ಹಣ ಪಡೆದು ನಾಲ್ಕು ವರ್ಷವಾದರೂ ಕೂಡ ಯಾರಿಗೂ ಮನೆಗಳನ್ನು ನೀಡಿಲ್ಲ ಎಂದು ಹಣವನ್ನು ನೀಡಿದವರು ಆರೋಪಿಸುತ್ತಿದ್ದಾರೆ. ಒಟ್ಟು 120 ಹೈಟೆಕ್ ಮನೆಗಳನ್ನು ನೀಡುತ್ತೇವೆ ಎಂದು ಹಣ ಪಡೆದುಕೊಂಡು ಕಂಪನಿ ಅನೇಕ ಜನರಿಗೆ ಮೋಸ ಮಾಡಿದೆ. ಕೊಟ್ಟ ಹಣವನ್ನೂ ಕೂಡ ವಾಪಸ್ ನೀಡಿಲ್ಲ ಎಂದು ಕಂಪನಿ ವಿರುದ್ಧ ಜನರು ಆರೋಪಿಸುತ್ತಿದ್ದಾರೆ.
